ಕರೆಂಟ್‍ಗೆ ಮುನ್ನ ಕರೆ

ಹಲೋ, ನಾವು ಇಂಧನ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ಮುಂದಿನ ಮೂರು ಗಂಟೆ ಕಾಲ ನಿಮ್ಮ ಪಂಪ್ ಸೆಟ್‍ಗೆ ತ್ರಿ ಫೇಸ್ ವಿದ್ಯುತ್ ಲಭ್ಯವಿರುತ್ತದೆ...!
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ಹಲೋ, ನಾವು ಇಂಧನ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ಮುಂದಿನ ಮೂರು ಗಂಟೆ ಕಾಲ ನಿಮ್ಮ ಪಂಪ್ ಸೆಟ್‍ಗೆ ತ್ರಿ ಫೇಸ್  ವಿದ್ಯುತ್ ಲಭ್ಯವಿರುತ್ತದೆ...!
ಇಂಥದೊಂದು ಕರೆ ರೈತರ ಮೊಬೈಲ್‍ಗೆ ಅಥವಾ ಸ್ಥಿರದೂರವಾಣಿಗೆ ಬಂದರೆ ಹೇಗಿರುತ್ತದೆ? ರೈತರು ಅಚ್ಚರಿಯಲ್ಲಿ ಮುಳುಗುವುದರಲ್ಲಿ ಯಾವುದೇ ಸಂಶಯವಿಲ್ಲ ತಾನೇ? ಇಂಧನ ಇಲಾಖೆ ಇಂಥದೊಂದು ಅಚ್ಚರಿ ಯೋ ಜನೆ ಜಾರಿಗೊಳಿಸಲು ಮುಂದಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಚಾರ ತಿಳಿಸಿದ್ದು, ಇಲಾಖೆ ಯಿಂದ ರೈತ ಸ್ನೇಹಿ ಕ್ರಮವಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಈ ಸಂಬಂಧ ರಾಜ್ಯದ ಎಲ್ಲ ಭಾಗಗಳಲ್ಲಿ ಇರುವ ರೈತರ ಮೊಬೈಲ್ ಮತ್ತು ಸ್ಥಿರದೂರವಾಣಿ ನಂಬರ್‍ಗಳನ್ನು ಸಂಗ್ರಹಿಸಲಾಗುತ್ತಿ ದೆ. ವಿದ್ಯುತ್ ಪೂರೈಕೆಯಾಗುವ ಸಂದರ್ಭದಲ್ಲಿ ರೈತರು ಬೇರೆ ಕೆಲಸದಲ್ಲಿ ನಿರತರಾಗದೇ ಇರುವಂತೆ ನೋಡಿ ಕೊಳ್ಳುವುದು ಇದರ ಉದ್ದೇಶ.
ನಂಬರ್‍ಗಳ ಡೇಟಾ ಬ್ಯಾಂಕ್ ಸಂಗ್ರಹವಾದ ನಂತರ ವಾಯ್ಸ್  ಮೆಸೇಜ್ ಅಥವಾ ಎಸ್‍ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುವುದು. ತ್ರಿಫೇಸ್  ವಿದ್ಯುತ್ ಪೂರೈಕೆ ಆರಂಭಕ್ಕೆ ಒಂದು ಗಂಟೆ ಮುಂಚೆ ಇಂಥ ಮಾಹಿತಿ ರವಾನಿಸಲಾಗುವುದು. ಆಗ ರೈತ ಎಲ್ಲೇ ಇದ್ದರೂ ತನ್ನ ಹೊಲಕ್ಕೆ ಬಂದು ಬೆಳೆಗೆ ನೀರು ಹಾಯಿಸಲು ಅನುಕೂಲ ವಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com