ಜೆಡಿಎಸ್ ಕಚೇರಿ ಶೆಡ್ ನಿರ್ಮಾಣಕ್ಕೂ ಕಂಟಕ

ಜೆಡಿಎಸ್ ಕಚೇರಿ ನಿರ್ಮಾಣಕ್ಕೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಸದ್ಯ ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ..
ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಜೆಡಿಎಸ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಜೆಡಿಎಸ್ ಕಚೇರಿ ನಿರ್ಮಾಣಕ್ಕೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಸದ್ಯ ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಲೆನೋವು ಎದುರಾಗಿದೆ.

ಜೆಡಿಎಸ್ ವತಿಯಿಂದ ಶೆಡ್ ನಿರ್ಮಿಸುತ್ತಿರುವ ಸ್ಥಳ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಶ್ರೀ ರಾಮಲಿಂಗೇಶ್ವರ ಮಠಕ್ಕೆ ಸೇರಿದ್ದೆಂದು ಮಠದ ಕಾನೂನು ಸಲಹೆಗಾರ ಎ.ಜಿ.ಭೂಪಯ್ಯ ಹೇಳಿದ್ದಾರೆ.  ರೇಸ್ ಕೋರ್ಸ್ ಬಳಿ ಇರುವ  ಸರ್ವೇ ನಂಬರ್ 37ರಲ್ಲಿ 27 ಗುಂಟೆ ಸ್ಥಳ ಸಂಪೂರ್ಣವಾಗಿ ರಾಮಲಿಂಗೇಶ್ವರ ಮಠಕ್ಕೆ ಸೇರಿದ್ದಾಗಿದ್ದು, ಸ್ವಾತಂತ್ರ್ಯಪೂರ್ವದಲ್ಲಿ ಈ ಸ್ಥಳದ ಪಕ್ಕದಲ್ಲೇ ಕಾಂಗ್ರೆಸ್ ಕಚೇರಿ  ಅಸ್ತಿತ್ವದಲ್ಲಿತ್ತು. ಬಳಿಕ ಕಚೇರಿ ತನ್ನದೆಂದು ಜೆಡಿಎಸ್ ಕಾನೂನು ಹೋರಾಟ  ನಡೆಸಿ ಸೋಲು ಅನುಭವಿಸಿದೆ.

ಇದೀಗ ಇವರ ಕೆಂಗಣ್ಣು ಸಮೀಪದ 27 ಗುಂಟೆ ಜಾಗದ ಮೇಲೆ ಬಿದಿದ್ದು, ಶೆಡ್ ನಿರ್ಮಿಸಲು ಮುಂದಾಗಿದ್ದಾರೆ. ಅತ್ತ ಈ ಜಾಗ ತಮ್ಮದೆಂದು ಕಾಂಗ್ರೆಸ್ ಸಹ ದನಿ ಎತ್ತಿದೆ.ಆದರೆ ವಾಸ್ತವದಲ್ಲಿ ಈ ಸ್ಥಳಯಾವ ರಾಜಕೀಯ ಪಕ್ಷಕ್ಕೂ ಸೇರಿದ್ದಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಹತ್ತಾರು ದಶಕಗಳ ಹಿಂದೆ ಶ್ರೀರಾಮೇಶ್ವರ ಮಠವು ಬೆಂಗಳೂರು ಸೇರಿದಂತೆ ಶಿವಮೊಗ್ಗದಲ್ಲಿಯೂ ನೂರಾರು ಎಕರೆ ಆಸ್ತಿ ಹೊಂದಿತ್ತು. ನಗರದಲ್ಲಿ ಮಠಕ್ಕೆ ಸೇರಿದ ಸುಮಾರು 700 ರಿಂದ 800 ಎಕರೆ ಆಸ್ತಿಯನ್ನು ಕೆಲವು ಪ್ರಭಾವಿಗಳು ತಾವೇ ವಾರಸು ದಾರರೆಂದು ಹೇಳಿಕೊಂಡು ಮಾರಿದ್ದಾರೆ. ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. (ಪಿಸಿಆರ್ ನಂ.7050/ 2012 -ಸಿಎಂಎಂ ಕೋರ್ಟ್).

ಇದರೊಂದಿಗೆ ರೇಸ್ ಕೋರ್ಸ್ ಸಮೀಪದ ಜಾಗದ ವ್ಯಾಜ್ಯವೂ ನ್ಯಾಯಾಲಯದಲ್ಲಿದ್ದು, ಪರಭಾರೆ ಮಾಡಲಾಗದಂತೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ ಎಂದರು. ಹೀಗಾಗಿ, ಆಸ್ತಿ ಸಂಬಂಧ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com