ಸರ್ಕಾರದ ವಿರುದ್ಧ ವಾಗ್ಬಾಣ ಮುಂದುವರಿಸಿದ ಈಶ್ವರಪ್ಪ

ರೈತರ ಸರಣಿ ಆತ್ಮಹತ್ಯೆ ಅಸ್ತ್ರ ಪ್ರಯೋಗಿಸಿದ ಪ್ರತಿ ಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಭಾರಿ ಸದ್ದು ಮಾಡಿದರು
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಬೆಂಗಳೂರು: ರೈತರ ಸರಣಿ ಆತ್ಮಹತ್ಯೆ ಅಸ್ತ್ರ ಪ್ರಯೋಗಿಸಿದ ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಈಶ್ವರಪ್ಪ ಸದನದಲ್ಲಿ ಭಾರಿ ಸದ್ದು ಮಾಡಿದರು.

ಸದನ ಆರಂಭವಾಗುತ್ತಿದ್ದಂತೆಯೇ ರೈತರ ಸರಣಿ ಆತ್ಮಹತ್ಯೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಇದಕ್ಕೆ ಅವಕಾಶ ಸಿಗದಿದ್ದಾಗ ಎಂದಿನಂತೆ ತಮ್ಮದೇಧಾಟಿಯಲ್ಲಿ ಸರ್ಕಾರದ ಮೇಲೆ ಟೀಕಾ ಪ್ರಹಾರ ಶುರು ಮಾಡಿದರು. ನಿಲುವಳಿ ಸೂಚನೆಗೆ ಅವಕಾಶ ಸಿಗದಿದ್ದಾಗ ದಿಧೀರ್ ಪ್ರತಿಭಟನೆ ಆಗುವಂತೆ ಮಾಡಿ ಸಭಾಪತಿ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿದರು. ಆ ನಂತರ ತಮ್ಮ ಬೇಡಿಕೆಯಂತೆ ಪ್ರಾಸ್ತಾವಿಕ ವಿಚಾರ ಸಲ್ಲಿಕೆಗೆ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲಿಗೆ ಸರ್ಕಾರದ ಮೇಲೆ ಎರಗಿದ ಈಶ್ವರಪ್ಪ, ರಾಜ್ಯದಲ್ಲಿ ದಿನಕ್ಕೆ ಐವರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಸರ್ಕಾರ ಈಗ ರೈತರ ಬಗ್ಗೆ ಮಾತನಾಡಲಾರಂಭಿಸಿದೆ ಎಂದು ರೇಗಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಬಗ್ಗೆ ಈಗ ಕಾಳಜಿ ವ್ಯಕ್ತಪಡಿಸಿದ್ದಾರೆ. ಅವರ ಮನೆಗೆ ಹೋಗುವ ಮಾತನಾಡುತ್ತಿದ್ದಾರೆ. ಇದೇ ಕೆಲಸ ಹಿಂದೆಯೇ ಮಾಡಿದ್ದರೆ ಇಂದು ಅನೇಕ ರೈತರ ಆತ್ಮಹತ್ಯೆ ತಪ್ಪಿಸಬಹುದಿತ್ತು. ಆದರೆ ಸರ್ಕಾರ ಕಬ್ಬು ಬೆಳೆಗಾರರ ಬಾಕಿ ಪಾವತಿಸಿಲ್ಲ. ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಮಾಡಲಿಲ್ಲ. ರೈತರಿಗೆ ಆರೋಗ್ಯ, ಶಿಕ್ಷಣವಂತೂ ಇಲ್ಲವೇ ಇಲ್ಲ. ಇದರಿಂದಾಗಿ ರೈತರು ಬೆಳೆ ನಷ್ಟವಾದಾಗ ಸಾಲದ ಬಾಧೆ ಹೆಚ್ಚಾದಾಗ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಅದರಲ್ಲೂ ಈಗ ರೈತರು ತಾನು ಸತ್ತರೆ ಹಣ ಸಿಗುತ್ತದೆ. ಕುಟುಂಬ ಉಳಿಯುತ್ತದೆ ಎನ್ನುವ ಭಾವಕ್ಕೆ ತಿರುಗುತ್ತಿದ್ದಾರೆ. ಆದ್ದರಿಂದ ಅವರ ಮನೆಗಳಿಗೆ ಸರ್ವಪಕ್ಷಗಳ ನಾಯಕರು ಸಂಘಟನೆಗಳ ಮುಖಂಡರು ಹೋಗಿ ಧೈರ್ಯ ತುಂಬಬೇಕು. ರೈತರ ಸಾಲ ಮನ್ನಾ ಮಾಡಬೇಕು. ಇದಕ್ಕಾಗಿ ಸರ್ಪಕ್ಷ ನಿಯೋಗ ಕರೆದೊಯ್ದು ನೆರವು ಕೋರಬೇಕು. ರೈತರಿಗೆ ನೆರವು, ಸಬ್ಸಿಡಿ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com