ಬಿಜೆಪಿ ಆರ್ ಎಸ್ ಎಸ್ ಗೆ ಆರ್ ಜೆಡಿ- ಆರ್ ಜೆಡಿ ಮೈತ್ರಿ ಬಗ್ಗೆ ಹೆಚ್ಚು ಚಿಂತೆ

ಹಾರ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಯು-ಆರ್ ಜೆಡಿ ಮೈತ್ರಿಯಿಂದ ತಾವು ಸೋಲುತ್ತೇವೆ ಎನ್ನುವ ಭಯದಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಚಿಂತೆ ಶುರುವಾಗಿದೆ ..
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
Updated on

ಪಾಟ್ನಾ: ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಯು-ಆರ್ ಜೆಡಿ ಮೈತ್ರಿಯಿಂದ ತಾವು ಸೋಲುತ್ತೇವೆ ಎನ್ನುವ ಭಯದಿಂದ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಚಿಂತೆ ಶುರುವಾಗಿದೆ ಎಂದು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ.

ಚುನಾವಣೆಯಲ್ಲಿ ಸೋಲುವ ಭೀತಿ ಈಗಾಗಲೇ ಬಿಜೆಪಿ ಆರ್ ಎಸ್ ಎಸ್ ಮಾಯಕರ ಮನದಲ್ಲಿ ಮನೆ ಮಾಡಿದೆ. ಹೀಗಾಗಿ ಮೈತ್ರಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.

ಜನತಾ ಪರಿವಾರ ಮತ್ತೆ ಒಗ್ಗೂಡಿನ ನಂತರದ ಬೆಳವಣಿಗೆಗೆಳ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಲಾಲೂ  ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿಗಳು 243 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com