ಸಕಾಲ ಅರಣ್ಯ ರೋದನ!

ರಾಜ್ಯ ಸರ್ಕಾರದ ಮಾತು ಕೇಳಲು ಅರಣ್ಯ ಇಲಾಖೆಗೆ ಇದು `ಸಕಾಲ'ವಲ್ಲವಯ್ಯ! ಸೊಲ್ಲೆತ್ತಿದರೆ ಸುಪ್ರೀಂ ಕೋರ್ಟ್ ಹಸಿರು ಪೀಠ...
ಸಕಾಲ
ಸಕಾಲ

ಬೆಂಗಳೂರು: ರಾಜ್ಯ ಸರ್ಕಾರದ ಮಾತು ಕೇಳಲು ಅರಣ್ಯ ಇಲಾಖೆಗೆ ಇದು `ಸಕಾಲ'ವಲ್ಲವಯ್ಯ! ಸೊಲ್ಲೆತ್ತಿದರೆ ಸುಪ್ರೀಂ ಕೋರ್ಟ್ ಹಸಿರು ಪೀಠ ತೋರಿಸುವ ಅರಣ್ಯ ಇಲಾಖೆಯ ಕತೆಯಿದು. ಸಕಾಲದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶನೀಡಿದ್ದರೆ, ರಾಜ್ಯದಲ್ಲಿರುವ ಅರಣ್ಯ ಇಲಾಖೆಯ 450 ಕಚೇರಿಗಳಿಗೆ ಇದು ಅರಣ್ಯ ರೋದನದಂತಾಗಿದೆ. ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೇ ಸಕಾಲ ಯೋಜನೆ ಯನ್ನು ಅನುಷ್ಠಾನಗೊಳಿಸದೇ ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಭಾಗವಾಗಿರುವ ಅರಣ್ಯ ಇಲಾಖೆಯ ಈ ಅಸಹಕಾರ ಧೋರಣೆಗೆ ಸ್ವತಃ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಬಾಯೆ ತ್ತಿದರೆ ಸುಪ್ರೀಂ ಕೋರ್ಟ್ ಹೇಳುತ್ತಾರೆ. ಆದರೆ ಇದು ರಾಜ್ಯ ಸರ್ಕಾರದ ಆದೇಶ, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬವಿಚಾರ ತಿಳಿದಿಲ್ಲ. ಇದನ್ನು ಗಂಬಿsೀರವಾಗಿ ಪರಿಗಣಿಸ
ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಸಚಿವರು ವಾರಾಂತ್ಯಕ್ಕೆ ಅಧಿಕಾರಿಗಳ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಈ ಬೇಜವಾಬ್ದಾರಿಗೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಸಚಿವರು,
ಚರ್ಚೆ ನಡೆಸಿ ಮಾಹಿತಿ ನೀಡುವುದಾಗಿ ವಿಧಾನಸೌಧದಲ್ಲಿ ಗುರುವಾರ ಹೇಳಿದ್ದಾರೆ. ಇದಲ್ಲದೇ ಅರಣ್ಯ ಇಲಾಖೆ ಅ„ಕಾರಿಗಳನ್ನು ಹದ್ದುಬಸ್ತಿಗೆ ತರುವ ಸಲುವಾಗಿ ಶೀಘ್ರವೇ
ಅರಣ್ಯ ಹಕ್ಕು ಕಾಯಿದೆ ಹಾಗೂ ಡೀಮ್ದ್  ಅರಣ್ಯ ಕಾಯಿದೆಯ ಅಂಶಗಳನ್ನು ಸಕಾಲದ ವ್ಯಾಪ್ತಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಸಕಾಲದ ವ್ಯಾಪ್ತಿಗೆ 6 ಸೇವೆ: ಸಾರ್ವಜನಿಕರಿಗೆ ಸಸಿಗಳ ವಿತರಣೆ, ಮರಗಳ ಕಟಾವಿಗೆ ಅನುಮತಿ, ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ ಪರಿಹಾರ, ವನ್ಯಪ್ರಾಣಿಗಳಿಂದ ಸಾಕುಪ್ರಾಣಿಗಳ ಪ್ರಾಣಹಾನಿ ಪರಿಹಾರ, ವನ್ಯ ಪ್ರಾಣಿಗಳ ಹಾವಳಿಯಿಂದ ಮಾನವನ ಸಾವು ಹಾಗೂ ಅಂಗವೈಕಲ್ಯ ಪರಿಹಾರ ಮತ್ತು ಸಾರಿಗೆ ರಹದಾರಿ ಕುರಿತ ವಿಷಯವು ಸಕಾಲದ ವ್ಯಾಪ್ತಿಗೆ ಬರುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇವತ್ತಿನವರೆಗೆ ಅರಣ್ಯಇಲಾಖೆ ಅಧಿಕಾರಿಗಳು ಒಂದು ಅರ್ಜಿಯನ್ನು ಸಕಾಲದ ಮೂಲಕ ಸ್ವೀಕರಿಸಿಲ್ಲ. ಅರಣ್ಯ ಇಲಾಖೆಯು ರಾಜ್ಯ ಸರ್ಕಾರದ ಪರಿವೆಗಿಲ್ಲ ಎಂಬಂತೆ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ವಿಧಾನಸಭೆ ಅ„ವೇಶನದಲ್ಲಿಯೂ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೇರಿದಂತೆ ಬಹುತೇಕ ಶಾಸಕರು ಅರಣ್ಯಇಲಾಖೆಯ ದುರ್ವರ್ತನೆಗೆ ಕಿಡಿಕಾರಿದ್ದಾರೆ. ಅಧಿಕಾರಿಗಳನ್ನು ಹತೋಟಿಯಲ್ಲಿಡಲು ಸರ್ಕಾರ ವಿಫ ಲ ವಾಗಿದೆ ಎಂದು ಕಾಗೋಡು ತಿಮ್ಮಪ್ಪ ಬಹಿರಂಗ ವಾಗಿ ಆಕ್ರೋಶವ್ಯಕ್ತಪಡಿಸಿದ್ದರು. ಈಗ ಸಕಾಲ ಯೋ ಜನೆ ಅನುಷ್ಠಾನ ವಿಚಾರದಲ್ಲಿ ಇದು ಸಾಬೀತಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಗೆ ಸಕಾಲ ಅನುಷ್ಠಾನಕ್ಕೆ ತಂದಿದ್ದ ಸರ್ಕಾರಕ್ಕೆ ಅರಣ್ಯ ಇಲಾಖೆ ತಿರುಗೇಟು ನೀಡಿದೆ. ಈ ಮೂಲಕ ಸರ್ಕಾರ ಹೇಳಿರುವ ಈ 6 ಸೇವೆ ಗಳನ್ನು ಸಕಾಲದಲ್ಲಿ ಪಾರದರ್ಶಕವಾಗಿ ನೀಡುವುದಿಲ್ಲ ಎಂದು ಅರಣ್ಯ ಇಲಾಖೆಯೇ  ಪರೋಕ್ಷವಾಗಿ ಹೇಳಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com