ಆರೋಗ್ಯಕ್ಕೆ 1 ಗಂಟೆ ಮೀಸಲಿಡಿ

ಸಾರ್ವಜನಿಕರು ನಿತ್ಯ ಜೀವನದಲ್ಲಿ ಒಂದು ಗಂಟೆ ಕಾಲ ಆರೋಗ್ಯಕ್ಕಾಗಿ ಮೀಸಲಿಡಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ...
ಆರೋಗ್ಯ ಕೇಂದ್ರಗಳ ಸೇವೆಗಳಿಗೆ ಚಾಲನೆ
ಆರೋಗ್ಯ ಕೇಂದ್ರಗಳ ಸೇವೆಗಳಿಗೆ ಚಾಲನೆ
Updated on

ಬೆಂಗಳೂರು: ಸಾರ್ವಜನಿಕರು ನಿತ್ಯ ಜೀವನದಲ್ಲಿ ಒಂದು ಗಂಟೆ ಕಾಲ ಆರೋಗ್ಯಕ್ಕಾಗಿ ಮೀಸಲಿಡಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆ ಮಂಗಳವಾರ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉನ್ನತೀಕರಣಗೊಂಡಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಗಳಿಗೆ ಚಾಲನೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಪಡೆದವರಲ್ಲೇ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಅಧಿಕವಾಗಿದೆ. ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದ್ದು, ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.
ನಿತ್ಯ ಒಂದು ಗಂಟೆಯನ್ನಾದರೂ ಜನರು ತಮ್ಮ ಆರೋಗ್ಯಕ್ಕೆ ಮೀಸಲಿಡಬೇಕು. ವ್ಯಾಯಾಮ, ತಪಾಸಣೆಗಾಗಿ ದಿನದ ಸಣ್ಣ ಸಮಯ ಮೀಸಲಿಟ್ಟರೂ ಆರೋಗ್ಯ ಸುಧಾರಿಸುತ್ತದೆ. ಸ್ಥಳೀಯ ಸಂ್ಸಥೆ ಹಾಗೂ ಸರ್ಕಾರ ಜಂಟಿಯಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಆರೋಗ್ಯ ವಿಮೆ, ಉಚಿತ ಚಿಕಿತ್ಸೆ, ಸೇರಿದಂತೆ ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

ಮೇಯರ್  ಶಾಂತ ಕುಮಾರಿ ಮಾತನಾಡಿ ಆರೋಗ್ಯ ಹಾಳಾದಾಗ ಮಾತ್ರ ಆಸ್ಪತ್ರೆಗಳಿಗೆ ತೆರಳುವ ಮನೋಭಾವವನ್ನು ಸಾರ್ವಜನಿಕರುಬಿಡಬೇಕು. ಕುಟುಂಬದಲ್ಲಿ ಎಲ್ಲ ಸದಸ್ಯರ ಆರೋಗ್ಯದ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯ  ಮಾತ್ರ ಕಡೆಗಣಿಸುತ್ತಾರೆ. ಜ್ವರ ಬಂದುಹಲವು ದಿನಗಳಾದರೂ ಮನೆಮದ್ದಿನಲ್ಲೇ ಕಾಲ ಕಳೆಯುವ ಅಭ್ಯಾಸ ಬಿಟ್ಟು ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಿಗೆ ತೆರಳಬೇಕು ಎಂದರು.
ಸಚಿವ ರೋಶನ್ ಬೇ ಗ್, ಬಿಬಿಎಂಪಿ ಉಪಮೇಯರ್ ರಂಗಣ್ಣ, ವಿರೋಧ ಪಕ್ಷದನಾಯಕ ಮಂಜುನಾಥ ರೆಡ್ಡಿ, ಆಯುಕ್ತ ಲಕ್ಷಿ ್ಮನಾರಾಯಣ ಹಾಜರಿದ್ದರು.



ಚಾಲನೆ
2014-15 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ರು 25.60 ಕೋಟಿ ಮಂಜೂರಾಗಿದ್ದು, ಉನ್ನತೀಕರಣಗೊಂಡ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಗಳಿಗೆ ಚಾಲನೆ ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com