ಕುಡಿಯುವ ನೀರಿಗೆ ಶಾಶ್ವತ ನೀತಿ ತನ್ನಿ ; ಸರ್ಕಾರಕ್ಕೆ ತಾಕೀತು

ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ...
ವಿಧಾನ ಸಭೆ
ವಿಧಾನ ಸಭೆ

ವಿಧಾನಸಭೆ: ನೀರು ಮಾರಾಟದ ಸರಕಲ್ಲ. ಮುಂದಿನ 25 ವರ್ಷಕ್ಕೆ ಅನ್ವಯವಾಗುವಂತೆ ಸಮಗ್ರ ಕುಡಿಯುವ ನೀರು ನೀತಿಯನ್ನು ರಾಜ್ಯ ಸರ್ಕಾರ ತುರ್ತಾಗಿ ಜಾರಿಗೆ ತರುವ
ಅಗತ್ಯವಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು  ಮಾನವನ ಬದುಕಿನ ಅನಿವಾರ್ಯ ಮತ್ತು ಸಂಸ್ಕೃತಿ. ಆದರೆ ಬಹುರಾಷ್ಟ್ರೀಯ ಸಂಸ್ಥೆಗಳ ಪಾಲಿಗೆ ಅದೊಂದು ವ್ಯಾಪಾರ. ಅವರ ಆದ್ಯತೆಗೆ ಹೆಚ್ಚು ಲಕ್ಷ್ಯ ನೀಡುತ್ತಿರು ವುದರಿಂದ ಈಗ ನೀರು ಮಾರಾಟದ ವಸ್ತುವೇ? ಎಂಬ ಪ್ರಶ್ನೆ ಉದ್ಭವವಾಗಿದೆ.ವಿಶ್ವ ಬ್ಯಾಂಕ್ ಕೂಡಾ ನೀರಿಗೆ ಬಳಕೆದಾರರ ಶುಲ್ಕ ವಿ„ಸಿ ಎಂಬ ಪ್ರಸ್ತಾಪ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ಕುಡಿಯುವ ನೀರಿನ ನೀತಿ ಅಗತ್ಯ. ನೀರು ಪ್ರತಿಯೊ ಬ್ಬನ ಹಕ್ಕು ಎಂದು ಹೇಳಿದರು.
ನಮ್ಮ ಹಿಂದಿನವರು ಮಾಡಿಟ್ಟ ಕೆರೆ- ಕೊಳ್ಳಗಳಿಂದಾಗಿ ನಾವು ಈಗ ನೀರು ಕುಡಿ ಯುತ್ತಿದ್ದೇವೆ. ಆದರೆ ನಮಗೆ ಮುಂದಿನವರಿಗೆ ಉಳಿಸಬೇಕೆಂಬ ಪ್ರಜ್ಞೆ  ಇಲ್ಲ. ಭವಿಷ್ಯ
ದಿಂದಲೂ ಕದಿಯುತ್ತಿದ್ದೇವೆ. ಇದಕ್ಕೆ ಕಾರಣ ಆಳುವುದು ಬೇರೆ, ಆಡಳಿತ ನಡೆಸುವುದು ಬೇರೆ ಎಂಬ ತತ್ವ ಮರೆತಿರುವುದು. ಆಡಳಿತ ನಡೆಸಬೇಕಾದ ಅಧಿಕಾರಿಗಳ ಕೈಗೆ ಆಳುವ ಹಕ್ಕನ್ನು ಕೊಟ್ಟು ಅವರು ರೂಪಿಸಿದ ಯೋಜನೆಗೆ ಅಸ್ತು ಎನ್ನುತ್ತಿದ್ದೇವೆ. ದಿನದ ಹೆಚ್ಚಿನ ಸಮಯ ಜನರ ಮಧ್ಯೆ ಇರಬೇಕಾದ ಶಾಸಕರು ವರ್ಗಾವಣೆಗಾಗಿ ಅಲೆಯುತ್ತಿ ದ್ದಾರೆ ಎಂದು ವ್ಯಂಗ್ಯವಾಡಿದರು.ಆದರೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ರೂಪಿಸುವ ವಿಚಾರದಲ್ಲಿ ಸರ್ಕಾರ ಇದುವರೆಗೆ ಚಿಂತನೆ ನಡೆಸಿಲ್ಲ. ನಮ್ಮ ಹಳೆಯ ನೀತಿಗಳಲ್ಲಿ ಈಗನ ಸಮಸ್ಯೆಗೆ ಪರಿ ಹಾರವಿಲ್ಲ. ಹೀಗಾಗಿ ಮುಂದಿನ 25 ವರ್ಷ ವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ನೀತಿ ರೂಪಿಸುವ ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com