ಮಹಿಳೆಗೆ 50% ಮೀಸಲು

ರಾಜ್ಯ ಸರ್ಕಾರ ಈಗಾಗಲೇ ಗ್ರಾಪಂ ಮೀಸಲು ಪಟ್ಟಿ ಬಿಡುಗಡೆ ಮಾಡಿದ್ದು, ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಗ್ರಾಪಂ ಮೀಸಲು ಪಟ್ಟಿ ಬಿಡುಗಡೆ ಮಾಡಿದ್ದು, ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಿದೆ. ಮೊದಲ ಹಂತ ಎರಡನೇ ಹಂತ
ಮೇ 11 ಮೇ 15
ಮೇ 18 ಮೇ 22
ಮೇ 19 ಮೇ 23
ಮೇ 21 ಮೇ 25
ಮೇ 31 ಜೂ.4
ಜೂ. 5 ಜೂ.5
ಜೂ. 6 ಜೂ.6
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನ ಮರು ಮತದಾನ ಅಗತ್ಯವಿದ್ದರೆ, ಮತದಾನ ನಡೆಸಬೇಕಾದ ದಿನ ನಾಮಪತ್ರ ಸಲ್ಲಿಸಲು ಕೊನೆಯ ದಿನ ನಾಮಪತ್ರ ಪರಿಶೀಲಿಸುವ ದಿನ ನಾಮಪತ್ರ ವಾಪಸ್‍ಗೆ ಕೊನೆಯ ದಿನ ಮತ ಎಣಿಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ಅಂತಿಮ ದಿನ ಮರು ಮತದಾನ ಬೆ.7 ರಿಂದ ಸಂ.5ರವರೆಗೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಬೆ.8ರಿಂದ ತಾಲೂಕು ಕೇಂದ್ರಗಳಲ್ಲಿ ಆರಂಭವಾಗಲಿದೆ.

ಮೊದಲ ಬಾರಿಗೆ ವೇಳಾಪಟ್ಟಿ
ಇವಿಎಂ ರಾಜ್ಯದ 29 ಜಿಲ್ಲೆಗಳಲ್ಲಿ ಪ್ರತಿ ಬಾರಿ ಮಾಡುವಂತೆ ಬ್ಯಾಲೆಟ್ (ಮತಪತ್ರ) ಮೂಲಕ ಚುನಾವಣೆ ನಡೆಯಲಿದೆ. ಬೀದರ್ ಜಿಲ್ಲೆಯ ಗ್ರಾಪಂಗಳಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ದ ಮೂಲಕ ಚುನಾವಣೆ ನಡೆಸಲಾಗುತ್ತದೆ.



ಮೀಸಲು ಪಟ್ಟಿ
ವರ್ಗ ಮೀಸಲು
ಮಹಿಳೆ 51,535
ಪರಿಶಿಷ್ಟ ಜಾತಿ 19,945
ಪರಿಶಿಷ್ಟ ಪಂಗಡ 11,269
ಹಿಂದುಳಿದ ವರ್ಗ-`ಎ' 14,678
ಹಿಂದುಳಿದ ವರ್ಗ-`ಬಿ' 3,560
ಮೀಸಲಿಡದ ಸ್ಥಾನಗಳು 50,531
ಒಟ್ಟು ಸ್ಥಾನಗಳು 94,458


ನೀತಿ ಸಂಹಿತೆ


ಮೇ 10ರ ಬೆ.8ರಿಂದ ಜೂ.7ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವ್ಯಯಿಸುವ ಹಣಕ್ಕೆ ಮಿತಿ ಹೇರಲಾಗಿಲ್ಲ. ನೀತಿ ಸಂಹಿತೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತದೆ. ಪಟ್ಟಣ ಪಂ., ಪುರಸಭೆ, ನಗರಸಭೆ, ನಗರಪಾಲಿಕೆ
ಹಾಗೂ ಮಹಾನಗರಪಾಲಿಕೆಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com