ಕೇಂದ್ರದ ಯೋಜನೆಗೆ ರಾಜ್ಯದ ಸಹಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಸಾಮಾಜಿಕ ಭದ್ರತಾ ಯೋಜನೆಗಳನ್ನು ನಾವು ರಾಜ್ಯದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತೇವೆ....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಸಾಮಾಜಿಕ ಭದ್ರತಾ ಯೋಜನೆಗಳನ್ನು ನಾವು ರಾಜ್ಯದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತೇವೆ. ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುತ್ತೇವೆ. ಇಂತಹ ಯೋಜನೆಗಳು ಜಾರಿಯಾಗು ತ್ತಿರುವುದು ಸಂತೋಷದ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರಾಜ್ಯ ಬ್ಯಾಂಕರ್‍ಗಳ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಪ್ರಧಾನ ಮಂತ್ರಿ ಸುರಕ್ಷಾಬಿಮಾ ಯೋಜನೆ', `ಅಟಲ್ ಪಿಂಚಣಿ ಯೋಜನೆ' ಮತ್ತು `ಪ್ರಧಾನ ಮಂತ್ರಿ  ಜೀವನ್ ಜ್ಯೋತಿ ಬಿಮಾ ಯೋಜನೆ'ಗೆ ಚಾಲನೆ ನೀಡಿ ಮಾತನಾಡಿದ ಅವರು `ಅಂತಿಮವಾಗಿ ಯಾರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೋ, ಯಾ ರಿಗೆ ಸಾಮಾ ಜಿಕ ಭದ್ರತೆ ಅವಶ್ಯಕತೆ ಇದೆಯೋ ಅವರಿಗೆ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ ಕೆಲಸ. ಅದನ್ನು ಕೇಂದ್ರವೇ ಮಾಡಲಿ, ರಾಜ್ಯವೇ ಮಾಡಲಿ
ಅದು ಉಪಯುಕ್ತ ಕೆಲಸ ಎಂದು ಭಾವಿಸುವವನು ನಾನು' ಎಂದರು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ
ವರ್ಷದಲ್ಲಿ  ರು. 12 ಕೊಟ್ಟರೆ ಸಾಕು. ಇದು ಅಪಘಾತ ದಲ್ಲಿ ಸಾವನ್ನಪ್ಪಿದರೆ ಅಥವಾ ಅಂಗವಿಕಲರಾದ ವ್ಯಕ್ತಿಗಳಿಗೆ ಪರಿಹಾರ ಸಿಗುವ ಕಾರ್ಯಕ್ರಮ.
ಈಗಾಗಲೇ ಇಂತಹ ವಿಮಾ ಯೋಜನೆಗಳ  ಜೊತೆಗೆ ಮತ್ತೊಂದು ಸೇರ್ಪಡೆಯಾಗುತ್ತಿದೆ. ಆದರೆ, ಇದರಲ್ಲಿ ಬ್ಯಾಂಕ್ ಉಳಿತಾಯ ಖಾತೆ ಹೊಂದಿ ರಬೇಕಾಗುತ್ತದೆ, ಅವರು ಮಾತ್ರ ಅರ್ಹರಾಗುತ್ತಾರೆ. ರಾಜ್ಯದಲ್ಲಿ ಅದಕ್ಕೂ ಮೊದಲೇ ಬಹುತೇಕರು ಬ್ಯಾಂಕ್ ಖಾತೆ ಹೊಂದಿದ್ದರು. ವಿವಿಧ ರೀತಿಯ ಸಾಮಾಜಿಕ ಆರ್ಥಿಕ ಕಾರ್ಯಕ್ರಮ ಇದ್ದಿದ್ದರಿಂದ ಶೇ.80ರಷ್ಟು ಜನ ಬ್ಯಾಂಕ್ ಖಾತೆ ಹೊಂದಿದ್ದರು. ಈಗ ಎಲ್ಲರೂ ಖಾತೆ ಹೊಂದಿದ್ದಾರೆಂದು ಭಾವಿಸಿ ದ್ದೇನೆ. ಅವರೆಲ್ಲರಿಗೂ ಇಂತಹ ಕಾರ್ಯಕ್ರಮ ಉಪಯೋಗವಾಗುತ್ತದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಒಂದು ಸಾಮಾನ್ಯ ವಿಮೆ ಯೋಜನೆ.ಕರ್ನಾಟಕದಲ್ಲಿ ಸಂಧ್ಯಾ ಸುರಕ್ಷಾ,ಅಂಗವಿಕಲ, ವೃದಾಟಛಿಪ್ಯ ವೇತನ, ಮನಸ್ವಿನಿ ಸೇರಿದಂತೆ ಅನೇಕ ಯೋಜನೆಗಳಲ್ಲಿ 50 ಲಕ್ಷದಷ್ಟು ಜನ ಪಿಂಚಣಿ ಪಡೆಯುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ವಿವಿಧ ಯೋಜನೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತಾಗಿರುವವರಿಗೆ ಮತ್ತು ಯಾರು ಹಣ ಕಟ್ಟಿಕೊಂಡು ಬರುತ್ತಾರೋ ಅವರಿಗೆ ಅಟಲ್ ಪಿಂಚಣಿ ಯೋಜನೆ ಸಹಕಾರಿಯಾಗಲಿದೆ ಎಂದರು.

ನಮ್ಮ ನೆಚ್ಚಿನ ಪ್ರಧಾನಿ ಅಟಲ್
`ನಮ್ಮ ನೆಚ್ಚಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೋಲ್ಕತಾದಲ್ಲಿ ಇಂದು ಮೂರು ಸಾಮಾಜಿಕ ಭದ್ರತೆಯಯೋಜನೆಗಳನ್ನು ದೇಶಕ್ಕೆ
ಸಮರ್ಪಿಸುತ್ತಿದ್ದಾರೆ.!' ಹೀಗೆಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳುತ್ತಿದ್ದಂತೆ ಇಡೀ ಬ್ಯಾಂಕ್ವೆಟ್  ಹಾಲ್‍ನಲ್ಲಿ ಒಂದು ಕ್ಷಣ ಗುಜುಗುಜು,
ತಿಳಿನಗು. ಈ ಬೆಳವಣಿಗೆಯಿಂದ ಆಗಷ್ಟೇ ಭಾಷಣ ಆರಂಭಿಸಿದ್ದ ಅನಂತಕುಮಾರ್  ಸಹ 10-12 ಸೆಕೆಂಡ್ ಮೌ ನಕ್ಕೆ ಜಾರಿದರು. ಇಷ್ಟರ ಮಧ್ಯದಲ್ಲಿಯೇ`ಪ್ರಧಾನಿ ಮೋದಿಯವರಪ್ಪ' ಎಂದು ಸಿಎಂ ಸಿದ್ದರಾಮಯ್ಯ ಹಿಂದಿನಿಂದ ಹೇಳಿದ್ದೂ ಆಯಿತು. ತಕ್ಷಣವೇ ಸಾವರಿಸಿ ಕೊಂಡ ಅನಂತ ಕುಮಾ ರ್, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಮೂರು ಯೋಜನೆ ದೇಶಕ್ಕೆ ಸಮರ್ಪಿಸುತ್ತಿದ್ದಾರೆ ಎಂದು ಹೇಳಿದರಲ್ಲದೇ, ಅಟಲ್ ಸರ್ಕಾರವಿದ್ದಾಗ ನಾನು ಮಂತ್ರಿಯಾಗಿದ್ದೆ, ಆ ಸವಿನೆನಪು ಬರುತ್ತಿದೆ. ಅಟಲ್‍ಜೀ ಜೊತೆಗೆ ಕೆಲಸ, ಈಗ ನರೇಂದ್ರ ಮೋದಿಯವರೊಂದಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಇದು ನಿಮ್ಮೆಲ್ಲರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ಹೇಳಿ ಆ ಸಂದರ್ಭಕ್ಕೆ ತೆರೆ ಎಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com