ವಿಪಕ್ಷ ನಾಯಕರು ದಾರಿ ತಪ್ಪಿದ ಮಕ್ಕಳು: ಉಗ್ರಪ್ಪ

ಸಿದ್ದರಾಮಯ್ಯ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದ್ದರೂ ವಿಪಕ್ಷಗಳು ಗೊತ್ತು ಗುರಿಯಿಲ್ಲದೆ ಸತ್ಯಕ್ಕೆ ದೂರವಾದ ವಿಚಾರ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ...
ಕಾಂಗ್ರೆಸ್ ಮುಖಂಡ ಉಗ್ರಪ್ಪ (ಸಂಗ್ರಹ ಚಿತ್ರ)
ಕಾಂಗ್ರೆಸ್ ಮುಖಂಡ ಉಗ್ರಪ್ಪ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದ್ದರೂ ವಿಪಕ್ಷಗಳು ಗೊತ್ತು ಗುರಿಯಿಲ್ಲದೆ ಸತ್ಯಕ್ಕೆ ದೂರವಾದ ವಿಚಾರ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ತನ್ಮೂಲಕ ಸ್ವತಃ ದಾರಿ ತಪ್ಪಿದ ಮಕ್ಕಳಾಗಿ ದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಪಕ್ಷಗಳಿಗೆ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಅಸ್ತ್ರಗಳು ಸಿಗುತ್ತಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲೂ ತೊಡಗಿಲ್ಲ. ಹೀಗಿರುವಾಗ ವಿನಾಕಾರಣ ಹುಳುಕು ಹುಡುಕುವ ಕೆಲಸದಲ್ಲಿ ಪ್ರತಿಪಕ್ಷಗಳು ನಿರತವಾಗಿವೆ. ಜತೆಗೆ ಸುಳ್ಳು ಆರೋಪ ಮಾಡುವ ಹೇಯ ಕೃತ್ಯಕ್ಕೆ ವಿಪಕ್ಷಗಳು ಮುಂದಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಡಿನೋಟಿಫಿಕೇಷನ್ ವಿಷಯವಾಗಿ ಮಾಡಿದ ಆರೋಪದಲ್ಲಿ ಹುರುಳಿಲ್ಲ.

ಆಗ ಭಾರಿ ಭಾಷಣ ಮಾಡಿ ಸರ್ಕಾರ ರಾಜ್ಯವನ್ನೇ ಕೊಳ್ಳೆ ಹೊಡೆದು ಬಿಟ್ಟಿದೆ ಎನ್ನುವ ರೀತಿಯಲ್ಲಿ ಆರ್ಭಟಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಈಗೇಕೆ ಮೌನವಾಗಿದ್ದಾರೆ? ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯವರ ವಿರುದ್ಧ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಲೋಕಾಯುಕ್ತರು ಎಫ್ ಐಆರ್ ದಾಖಲಿಸಿದ್ದಾರೆ. ಗಂಗೇನಹಳ್ಳಿಯಲ್ಲಿ ಕುಮಾರಸ್ವಾಮಿ ಅತ್ತೆಯ ಹೆಸರಲ್ಲಿ ಅಕ್ರಮವಾಗಿ ಜಮೀನು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com