ಕಾಂಗ್ರೆಸ್‍ನಿಂದ ಕನ್ನಡಿಗರಿಗೆ ಸಾಲಭಾಗ್ಯ ಹೊರೆ: ಜಗದೀಶ ಶೆಟ್ಟರ್

ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದೊಂದಿಗೆ ಎರಡು ವರ್ಷದಲ್ಲಿ ರು.42 ಸಾವಿರ ಕೋಟಿ ಸಾಲ ಮಾಡಿದೆ. ಇದರಿಂದ ಕನ್ನಡಿಗರ ಮೇಲೆ ರು.1.80 ಲಕ್ಷ ಕೋಟಿ ಸಾಲದ ಭಾರವಿದ್ದು, ಮುಂದೆ ಜನರ ಮೇಲೆ ಸಾಲ ಹೊರಿಸಲು `ಸಾಲಭಾಗ್ಯ'...
ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್
ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್

ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದೊಂದಿಗೆ ಎರಡು ವರ್ಷದಲ್ಲಿ ರು.42 ಸಾವಿರ ಕೋಟಿ ಸಾಲ ಮಾಡಿದೆ. ಇದರಿಂದ ಕನ್ನಡಿಗರ ಮೇಲೆ ರು.1.80 ಲಕ್ಷ ಕೋಟಿ ಸಾಲದ ಭಾರವಿದ್ದು, ಮುಂದೆ ಜನರ ಮೇಲೆ ಸಾಲ ಹೊರಿಸಲು `ಸಾಲಭಾಗ್ಯ' ಯೋಜನೆ ಜಾರಿಗೆ ತರಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷಗಳ ಸಾಧನಾ ಸಮಾವೇಶವನ್ನು ಕಾಂಗ್ರೆಸ್ ಯಾವ ಪುರುಷಾರ್ಥಕ್ಕೆ ಮಾಡುತ್ತಿದೆ? ಎರಡು ವರ್ಷಗಳಲ್ಲಿ ರು.42 ಸಾವಿರ ಕೋಟಿ ಸಾಲ ಮಾಡಿದೆ. ರಾಜ್ಯದಲ್ಲಿ ಆಡಳಿತ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಂತ್ರಿಗಳು ಕೆಲಸ ಮಾಡುತ್ತಿಲ್ಲ.

ಮುಖ್ಯಮಂತ್ರಿಗೆ ಆಡಳಿತದ ಮೇಲೆ ಹಿಡಿತವಿಲ್ಲ ಎಂದು ಆರೋಪಿಸಿದರು. ತಮ್ಮ ಸರ್ಕಾರದ ಸಾಧನೆ ಬಗ್ಗೆ ಜಾಹೀರಾತು ನೀಡಿ ಅಂಕಿ-ಸಂಖ್ಯೆಗಳನ್ನು ಒಳಗೊಂಡ ಸುಳ್ಳು ಮಾಹಿತಿ ನೀಡಲಾಗಿದೆ. ಈ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಾದ ಮೇಲೆ ಜಾಹೀರಾತು ನೀಡಿದ್ದು ಕಾನೂನು ಉಲ್ಲಂಘನೆ. ಚುನಾವಣೆ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com