ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಮಗ್ರ ಬದಲವಣೆ ತರುವ ಉದ್ದೇಶಕ್ಕಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ವಿಧೇಯಕ ರೂಪದಲ್ಲಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದ್ದು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ವಿಧಾನಸಭೆ: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಮಗ್ರ ಬದಲವಣೆ ತರುವ ಉದ್ದೇಶಕ್ಕಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ವಿಧೇಯಕ ರೂಪದಲ್ಲಿ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದ್ದು, ``ಗ್ರಾಮ ಸ್ವರಾಜ್ ಪಂಚಾಯಿತ್ ರಾಜ್' ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದೆ.

ಕರ್ನಾಟಕ ಪಂಚಾಯಿತ್ ರಾಜ್ ಕಾಯ್ದೆಗೆ ಹೊಸ ಸ್ವರೂಪ ನೀಡುವುದರ ಜತೆಗೆ ಹೊಸ ಹೆಸರನ್ನೂ ನೀಡಲಾಗಿದ್ದು, 155 ಪುಟಗಳ ಭಾರಿ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ್ದಾರೆ. ಜತೆಗೆ ಇದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತ್, ತಾಲೂಕು ಪಂಚಾಯಿತ್ ಹಾಗೂ ಜಿಲ್ಲಾ ಪಂಚಾಯಿತಿಯ ಹಕ್ಕು ಮತ್ತು ಕರ್ತವ್ಯ ನಿಯಮಾವಳಿಯನ್ನು ಈ ವಿಧೇಯಕದಲ್ಲಿ ರೂಪಿಸುವ ಮೂಲಕ ವಿಕೇಂದ್ರೀಕರಣ ಸಿದಾಟಛಿಂತ ವಿಸ್ತಾರ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಲಾಗಿದೆಯಾದರೂ, ಪಂಚಾಯಿತಿ ಅಧ್ಯಕ್ಷರನ್ನು ನೇರ ಚುನಾವಣೆ ಮೂಲಕ ಆಯ್ಕೆ ನಡೆಸಬೇಕೆಂಬ ರಮೇಶ್ ಕುಮಾರ್ ಸಮಿತಿಯ ಪ್ರಧಾನ ಶಿಫಾರಸನ್ನೇ ಈ ವಿಧೇಯಕದಿಂದ ಕೈ ಬಿಡಲಾಗಿದೆ. 155 ಪುಟಗಳ ವಿಧೇಯಕದಲ್ಲಿ ಮೂಲ ಕಾಯ್ದೆಗೆ 78 ತಿದ್ದುಪಡಿ ತರಲಾಗಿದ್ದು, ರಮೇಶ್ ಕುಮಾರ್ ಸಮಿತಿಯ 88 ಶಿಫಾರಸು ಪೈಕಿ 66 ಹಾಗೂ ಸಚಿವ ಸಂಪುಟ ಉಪ ಸಮಿತಿಯ 12 ಶಿಫಾರಸುಗಳನ್ನು ಅಡಕಗೊಳಿಸಲಾಗಿದೆ.

ರಮೇಶ್ ಕುಮಾರ್ ಸಮಿತಿಯ 17 ಶಿಫಾರಸುಗಳನ್ನು ವಿಧೇಯಕದಿಂದ ಕೈ ಬಿಡಲಾಗಿದೆ. ಈ 17 ಶಿಫಾರಸುಗಳನ್ನು ಪಂಚಾಯಿತ್  ರಾಜ್ ವ್ಯವಸ್ಥೆಯಲ್ಲಿ ಜಾರಿಗೆ ತಂದರೆ, ವಿಧಾನಸಭೆ
ಸದಸ್ಯರ ಹಕ್ಕುಗಳು ಮೊಟಕುಗೊಳ್ಳಬಹುದು ಎಂದು ಕಾಂಗ್ರೆಸ್ ಸದಸ್ಯರೇ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತಾಪ ಕೈ ಬಿಟ್ಟಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಸಚಿವ ಸ್ಥಾನ: 178 ನೇ ತಿದ್ದುಪಡಿ ಪ್ರಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ರಾಜ್ಯ ಸಚಿವ ಸ್ಥಾನಮಾನವನ್ನು ಹೊಂದಿರುವ ಜತೆಗೆ ಅವರಿಗೆ ನಿಗದಿಪಡಿಸಿದ ಸಂಬಳ ಹಾಗೂ ಇತರೆ ಉಪಲಬಿಟಛಿಗಳಿಗೆ ಹಕ್ಕುಳುವರಾಗಿರುತ್ತಾರೆ. ಆದರೆ ದುರ್ನಡತೆ, ಅಸಾಮಥ್ರ್ಯ ಸಂದರ್ಭದಲ್ಲಿ ಸರ್ಕಾ ರಕ್ಕೂ ಆತನನ್ನು ಅಧಿಕಾರದಿಂದ ತೆಗೆಯುವುದಕ್ಕೆ ಅವಕಾಶವಿದೆ. ಆದರೆ ಆಯ್ಕೆಯಾದ ದಿನ ದಿಂದ 6 ತಿಂಗಳೊಳಗೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದಟಛಿ ಅವಿಶ್ವಾಸ ನಿರ್ಣಯ ಮಂಡನೆ ಮಾಡುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com