(ಸಾಂದರ್ಭಿಕ ಚಿತ್ರ)
ರಾಜಕೀಯ
ಸಿಂಗಟಾಲೂರು ಯೋಜನೆಗೆ ಹಣವೆಲ್ಲಿದೆ?
ಸಿಂಗಟಾಲೂರು ಏತ ನೀರಾವರಿ ಯೋಜನೆಯ 3ನೇ ಹಂತವನ್ನು 2018ರಲ್ಲಿ ಪೂರ್ಣಗೊಳಿಸಲು ಸರ್ಕಾರವೇನೋ ಉದ್ದೇಶಿಸಿದೆ, ಆದರೆ ಹಣ ಎಲ್ಲಿದೆ ಎಂದು ಬಿಜೆಪಿ ಸದಸ್ಯ ಅರುಣ್ ಶಹಾಪುರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು...
ವಿಧಾನ ಪರಿಷತ್: ಸಿಂಗಟಾಲೂರು ಏತ ನೀರಾವರಿ ಯೋಜನೆಯ 3ನೇ ಹಂತವನ್ನು 2018ರಲ್ಲಿ ಪೂರ್ಣಗೊಳಿಸಲು ಸರ್ಕಾರವೇನೋ ಉದ್ದೇಶಿಸಿದೆ, ಆದರೆ ಹಣ ಎಲ್ಲಿದೆ ಎಂದು ಬಿಜೆಪಿ ಸದಸ್ಯ ಅರುಣ್ ಶಹಾಪುರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರಶ್ನೋತ್ತರ ವೇಳೆಯಲ್ಲಿ ಎಸ್.ವಿ.ಸಂಕನೂರ ಪರವಾಗಿ ಪ್ರಶ್ನೆ ಕೇಳಿದ ಅರುಣ್ ಶಹಾಪೂರ ಅವರು, ಕಾಮಗಾರಿ ಯಾವ ಹಂತದಲ್ಲಿದೆ, ಅದನ್ನು ಮುಗಿಸಲು ಸರ್ಕಾರ ಎಲ್ಲಿ ಹಣವಿಟ್ಟಿದೆ ಎಂದರು.
ಇದಕ್ಕುತ್ತರಿಸಿದ ಸಚಿವ ಎಂ.ಬಿ. ಪಾಟೀಲ್, ಹಣವನ್ನು ಮುಖ್ಯಮಂತ್ರಿಯವರು ನೀಡುತ್ತಾರೆ ಎಂದು ಭರವಸೆ ನೀಡಿದರು. ಮೂಲ ಯೋಜನೆಯ ಅನ್ವಯ 3ನೇ ಹಂತದ ಯೋಜನೆಯನ್ನು 2018ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ