ಅನುದಾನ ದುರ್ಬಳಕೆ ಬಿಜೆಪಿಯಿಂದ ಆರೋಪ

ಸಹಕಾರ ಇಲಾಖೆಗೆ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ರೈತರಿಗೆ ನೀಡದೇ ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಬಸವರಾಜ್ ಬೊಮ್ಮಾಯಿ ಮಾಡಿದ ಆರೋಪ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಯಿತು...
ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ)
ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ)

ವಿಧಾನಸಭೆ: ಸಹಕಾರ ಇಲಾಖೆಗೆ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ರೈತರಿಗೆ ನೀಡದೇ ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಬಸವರಾಜ್ ಬೊಮ್ಮಾಯಿ ಮಾಡಿದ ಆರೋಪ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಯಿತು.

ಬರದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ಸಹಕಾರ ಇಲಾಖೆಯಲ್ಲಿ ಅವಧಿ ಪೂರ್ವ ಸಾಲ ವಸೂಲಿ ನಡೆಯುತ್ತಿದೆ. ಇಲಾಖೆ ಸಾಹುಕಾರ್ ಇಲಾಖೆಯಾಗಿ ಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿದರು.

ಅವಧಿ ಪೂರ್ವ ಸಾಲ ಕಟ್ಟುವ ರೈತರಿಗೆ ಕೇಂದ್ರ ಶೇ.3ರಷ್ಟು ಪ್ರೋತ್ಸಾಹ ನೀಡುತ್ತದೆ. ಆದರೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ ಎನ್ನುವ ಸರ್ಕಾರ ಕಳೆದ 2  ವರ್ಷದಿಂದ ಪ್ರೋತ್ಸಾಹ ಧನವನ್ನು ರೈತರಿಗೆ ತಲುಪಿಸಿಲ್ಲ. ನಿಮ್ಮದು ಬೇಜವಾಬ್ದಾರಿ ಸರ್ಕಾರ ವಾರ್ಷಿಕ ರು.150 ಕೋಟಿಯಷ್ಟು ಹಮ ರೈತರಿಗೆ ದೊರೆಯದಂತೆ ಮಾಡುತ್ತಿದ್ದೀರಿ. ಶೂನ್ಯ ಬಡ್ಡಿ ದರ ಎನ್ನುವ ನೀವು ಬಡ್ಡಿಯನ್ನು ಶೇ.14 ರಿಂದ ಶೂನ್ಯಕ್ಕೆ ಇಳಿಸಿಲ್ಲ. ನಮ್ಮ ಕಾಲದಲ್ಲಿ ಶೇ.1ರಷ್ಟಿದ್ದ ಬಡ್ಡಿ ಶೂನ್ಯಕ್ಕೆ ಇಳಿಸಿದ್ದೀರಿ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com