ಕೈ ಜೋಡಿಸಲು ಜೆಡಿಎಸ್ ಹಿಂದೇಟು: ಹೊಸಬರಿಗೆ ಅವಕಾಶ ಅನುಮಾನ

ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆಯುವ ಚುನಾವಣಾ ಮೈತ್ರಿ ವಿಚಾರಕ್ಕೆ ಜೆಡಿಎಸ್ ತೆರೆ ಎಳೆದಿದೆ.....
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಚಿಹ್ನೆ
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಚಿಹ್ನೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆಯುವ ಚುನಾವಣಾ ಮೈತ್ರಿ ವಿಚಾರಕ್ಕೆ ಜೆಡಿಎಸ್ ತೆರೆ ಎಳೆದಿದೆ. ಇದರಿಂದಾಗಿ ಈಗ ಕಾಂಗ್ರೆಸ್ ಏಕಾಂಗಿ ಹೋರಾಟಕ್ಕೆ ಸಜ್ಜಾಗಬೇಕಿದೆ.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ದಪಡಿಸಿತ್ತು. ಆದರೆ ಈ ಪಟ್ಟಿ ಆಧಾರದ ಮೇಲೆ ಚುನಾವಣೆ ಗೆಲ್ಲಬಹುದೆಂಬ ಧೈರ್ಯ ಕಾಂಗ್ರೆಸ್‍ಗೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನವೇ ಜೆಡಿಎಸ್ ಜತೆ ಮೈತ್ರಿ ಕುರಿತು ಚಿಂತನೆ ನಡೆದಿತ್ತು. ಆದರೆ ಕಾಂಗ್ರೆಸ್ ಜತೆ ಕೈಜೋಡಿಸಲು ಜೆಡಿಎಸ್ ಹಿಂದೇಟು ಹಾಕಿ ಎಲ್ಲಾ 25 ಕ್ಷೇತ್ರಗಳಿಗೂ ಸ್ವಂತವಾಗಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಈಗ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿದೆ.

ಸಂಭಾವ್ಯ ಪಟ್ಟಿ ಏನೆನ್ನುತ್ತದೆ: ಸಂಭಾವ್ಯ ಪಟ್ಟಿ ಪ್ರಕಾರ ಬೀದರ್‍ನಿಂದ ಧರ್ಮಸಿಂಗ್ ಅವರ ಪುತ್ರ ವಿಜಯ್ ಸಿಂಗ್, ಗುಲ್ಬರ್ಗ - ಅಲ್ಲಮ ಪ್ರಭು ಪಾಟೀಲ್, ರಾಯಚೂರು-ಕೊಪ್ಪಳ ಸ್ವರೂಪ್ ಪಾಟೀಲ್ ಅಥವಾ ಇಟಗಿ,  ಬಳ್ಳಾರಿ-ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಮತ್ತು ಸೂರ್ಯ ನಾರಾಯಣ ರೆಡ್ಡಿ ಮಧ್ಯೆ ಪೈಪೋಟಿ, ಬಾಗಲಕೋಟೆ-ವಿಜಯಪುರ- ಎಸ್. ಆರ್.ಪಾಟೀಲ್, ಬೆಳಗಾವಿ- ವೀರ ಕುಮಾರ್ ಅಪ್ಪಾಸೋ ಪಾಟೀಲ್, ಧಾರವಾಡ - ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಚಿತ್ರದುರ್ಗ- ರಘು ಆಚಾರ್, ಹಾಸನ- ಗೋಪಾಲಸ್ವಾಮಿ, ಜವರೇಗೌಡ, ಎಸ್.ಎಂ.ಆನಂದ, ಮಂಡ್ಯ- ಶಿವರಾಮೇಗೌಡ/ ಸುರೇಶ್ ಗೌಡ, ಬೆಂಗಳೂರು ಗ್ರಾಮಾಂತರ-ರವಿ, ಬೆಂಗಳೂರು ನಗರ-ದಯಾನಂದ ರೆಡ್ಡಿ/ ನಾರಾಯಣ ಸ್ವಾಮಿ, ತುಮಕೂರು- ಶಾಸಕ ರಾಜಣ್ಣ ಅವರ ಪುತ್ರ / ಸಚಿವ ಜಯಚಂದ್ರ ಅವರ ಪುತ್ರ, ಕೋಲಾರ- ನಸೀರ್ ಅಹ್ಮದ್, ವಿ.ಮುನಿಯಪ್ಪ, ಅನಿಲ್ ಕುಮಾರ್, ರಮೇಶ್, ಸಿ.ಎಚ್.ನಾಗರಾಜ್, ಶಿವಮೊಗ್ಗ -ಪ್ರಸನ್ನ, ಚಿಕ್ಕಮಗಳೂರು- ಗಾಯತ್ರಿ ಶಾಂತೇ ಗೌಡ/ಡಾ.ವಿಜಯ್ ಕುಮಾರ್, ಕೆ.ಬಿ.ಮಲ್ಲಿಕಾರ್ಜುನ, ದಕ್ಷಿಣ ಕನ್ನಡ- ಪ್ರತಾಪಚಂದ್ರ ಶೆಟ್ಟಿ/ ರವಿಶಂಕರ್ ಶೆಟ್ಟಿ/ ಜಯಪ್ರಕಾಶ್ ಹೆಗ್ಡೆ/  ಮಡಿಕೇರಿ - ಅರುಣ್ ಮಾಚಯ್ಯ/ ಚಂದ್ರಕಲಾ/ ಚಂದ್ರಮೌಳಿ, ಉತ್ತರ ಕನ್ನಡ- ಗೋಟ್ನೇಕರ್, ಮೈಸೂರು- ಧರ್ಮಸೇನ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಸಿದ್ಧತೆ ನಡೆಸಲಾಗಿದೆ.

ಹೊಸ ಮುಖ : ಈ ಪೈಕಿ ಪ್ರತಾಪಚಂದ್ರ ಶೆಟ್ಟಿ, ನಸೀರ್ ಅಹ್ಮದ್, ಟಿ.ಜಾನ್ ಹಾಗೂ ಗಾಯತ್ರಿ ಶಾಂತೇಗೌಡ ಅವರು ಆರಂಭಿಕ ಹಂತದಲ್ಲಿ ತಮಗೆ ಟಿಕೆಟ್ ಬೇಡ ಎಂದು ಹೇಳಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಟಿ.ಜಾನ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸ್ಪರ್ಧೆಗೆ ಸಿದ್ದರಾಗಿದ್ದಾರೆ. ಹೀಗಾಗಿ ಹೊಸ ಮುಖಗಳ ಪ್ರವೇಶ ಅನುಮಾನಾಸ್ಪದ ಎನ್ನಲಾಗುತ್ತಿದೆ. ಆದರೂ ಕಾಂಗ್ರೆಸ್‍ನ ಸಂಭಾವ್ಯ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಸಮ್ಮತಿ ಸಿಕ್ಕಿಲ್ಲ. ಗುರು ವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಸೋಮವಾರ ಉಭಯ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com