ರೈತರ ಸಮಸ್ಯೆ ಅರಿಯಲು ದೇಶಾದ್ಯಂತ ಪಾದಯಾತ್ರೆ

ದೇಶಾದ್ಯಂತ ರೈತರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಕಾರಣಗಳನ್ನು ತಿಳಿದು ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿಯವರು...
ಡಾ. ಜಿ. ಪರಮೇಶ್ವರ
ಡಾ. ಜಿ. ಪರಮೇಶ್ವರ
ಹಾವೇರಿ:  ದೇಶಾದ್ಯಂತ ರೈತರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಕಾರಣಗಳನ್ನು ತಿಳಿದು ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿಯವರು ದೇಶ-ವ್ಯಾಪಿ ಪ್ರವಾಸ ಮಾಡುತ್ತಿದ್ದು, ರಾಜ್ಯದ ರೈತರ ಸಮಸ್ಯೆ ಅರಿಯಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಾ. ಜಿ. ಪರಮೇಶ್ವರ ತಿಳಿಸಿದರು. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮದಲ್ಲಿ ನಡೆಯುತ್ತಿರುವ ಸಿದ್ಧತಾ ಕಾರ್ಯಗಳನ್ನು ಬುಧವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಬ್ಬಿಗೆ ಬೆಲೆ, ನೀರಾವರಿ, ಸಾಲ ನೀಡುವ ಪದ್ಧತಿಯಲ್ಲಿ ಮಾರ್ಪಾಡು, ಬೆಳೆ ವಿಮೆ ಇತ್ಯಾದಿ ಸಮಸ್ಯೆ ಕುರಿತು ರೈತರಿಂದಲೇ ಮಾಹಿತಿ ಪಡೆಯುತ್ತಿದ್ದಾರೆ. ರೈತರಿಂದ ಸಲಹೆ ಸೂಚನೆ ಪಡೆದು ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸ ಲಾಗುವುದು. ರಾಜ್ಯದಲ್ಲಿ ಪಕ್ಷದ  ಸರ್ಕಾರವಿದ್ದು, ಇಲ್ಲಿ ಅದನ್ನು ಜಾರಿಗೆ ತಂದುಅದನ್ನೇ  ರಾಷ್ಟ್ರಮಟ್ಟದಲ್ಲೂ ಅಳವಡಿಸಬಹುದೇ ಎಂದು ಪರಿಶೀಲಿಸಲು ರಾಹುಲ್ ಗಾಂಧಿಯವರು ಪ್ರವಾಸ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
ಬರದಿಂದಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡಬೇಕುಎಂದು ಎಐಸಿಸಿಯಿಂದ ಒತ್ತಾಯಿಸಲಾಗಿದೆ. ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿನ ಸಾಲದ ಬಡ್ಡಿ ಮನ್ನಾ ಮಾಡಿದೆ. ಕಾನೂನುಚೌಕಟ್ಟಿನಲ್ಲಿ ಏನೆಲ್ಲ ಸಾಧ್ಯವೋ ಅದನ್ನು ಪಕ್ಷ ಹಾಗೂ ಸರ್ಕಾರ ಮಾಡಲು ಸಿದಟಛಿವಿದೆ. ಪಕ್ಷದ ಸಂಸದರೂ ರೈತರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಆದರೆ, ಕೇಂದ್ರದಿಂದ ಸ್ಪಂದನೆ ದೊರೆತಿಲ್ಲ ಎಂದರು.
ಮಹದಾಯಿ ಸಮಸ್ಯೆಯೇ ಅಲ್ಲ: ಮಹದಾಯಿ ಯೋಜನೆ ಕುರಿತು ರಾಹುಲ್ ಅವರ ಗಮನಕ್ಕೂ ತರಲಾಗಿದೆ. ಈ ಯೋಜನೆ ದೊಡ್ಡ ಸಮಸ್ಯೆಯೇ ಅಲ್ಲ. ಪ್ರಧಾನಿಯವರು ಗೋವಾ ಹಾಗೂ ಕರ್ನಾಟಕ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಇದು ನಮ್ಮ ಒತ್ತಾಯ ಕೂಡ ಆಗಿದೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com