ಬೆಂಗಳೂರು: ಮಡಿವಾಳದಲ್ಲಿ ಟೆಂಪೋ ಟ್ರಾವೆಲರ್‍ನಲ್ಲಿ ಬಿಪಿಒ ಉದ್ಯೋಗಿ ಮೇಲೆ ಗ್ಯಾಂಗ್ ಗ್ಯಾಂಗ್ ರೇಪ್ ಹಾಗೂ ಚಿಕ್ಕ ಜಾಲದಲ್ಲಿ 15 ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಕೆಜೆ ಜಾರ್ಜ್ ಶುಕ್ರವಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸಚಿವ ಜಾರ್ಜ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ. ಬೆಳಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಈಶಾನ್ಯ ವಿಭಾಗ ಡಿಸಿಪಿ ವಿಕಾಸ್ ಕುಮಾರ್ ಹಾಗೂ ಠಾಣೆಯ ಅಧಿಕಾರಿ, ಸಿಬ್ಬಂದಿ ಜತೆ ಮಾತನಾಡಿದ ಸಚಿವರು, ಸುಭಾಶ್ ನಗರದ ಬಾಲಕಿ ಸಂಗೀತಾ (15) ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಕೇಳಿದರು. ನೆರಮನೆಯಯುವಕರು ಅಪಹರಿಸಿಕೊಂಡು ಹೋಗಿ ವಿವಸ್ತ್ರಉಗೊಳಿಸಿ ಮೊಬೈಲ್ ಫೋನ್‍ನಲ್ಲಿ ಫೋಟೋ ತೆಗೆದುಕೊಂಡಿದ್ದರಿಂದ ನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆಂದು ಪಾಲಕರು ಆರೋಪಿಸಿದ್ದಾರೆ.