ಶಾಸಕ ಜೀವರಾಜ್ ಸೇರಿ 23 ಮಂದಿಗೆ ಚಾರ್ಜ್‍ಶೀಟ್

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಅನ್ವಯ ಇಲ್ಲಿನ ಲೋಕಾಯುಕ್ತ ನ್ಯಾಯಾಲಯದ ದೇಶದಂತೆ ಪ್ರಕರಣದ ತನಿಖೆ ನಡೆಸಿದ..
ಶಾಸಕ ಡಿಎನ್ ಜೀವರಾಜ್ (ಸಂಗ್ರಹ ಚಿತ್ರ)
ಶಾಸಕ ಡಿಎನ್ ಜೀವರಾಜ್ (ಸಂಗ್ರಹ ಚಿತ್ರ)

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಅನ್ವಯ ಇಲ್ಲಿನ ಲೋಕಾಯುಕ್ತ ನ್ಯಾಯಾಲಯದ ದೇಶದಂತೆ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಸೇರಿದಂತೆ ಒಟ್ಟು 23 ಮಂದಿಯ ವಿರುದ್ಧ ಗುರುವಾರ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಬಗರ್‍ಹುಕುಂ ನಮೂನೆ 50 ಮತ್ತು 53ರಲ್ಲಿ ತಾವು ಕೃಷಿ ಮಾಡುತ್ತಿದ್ದ ಭೂಮಿಯ ಸಕ್ರಮೀಕರಣಕ್ಕಾಗಿ ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ ಅನೇಕ ರೈತರ ಹೆಸರನ್ನು ಕೈಬಿಟ್ಟಿರುವ ಶಾಸಕ  ಜೀವರಾಜ್ ಅವರ ಅಧ್ಯಕ್ಷತೆಯ ಸಮಿತಿ ತಮ್ಮ ಹಿಂಬಾಲಕರ ಹೆಸರನ್ನು ಅಕ್ರಮವಾಗಿ ಸೇರಿಸಿ ಭಾರೀ ಪ್ರಮಾಣದ ಅಕ್ರಮ ನಡೆಸಿದೆ, ಕಾನೂನು ಬಾಹಿರವಾಗಿ ನಡೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ವಕೀಲ ಡಿ.ಬಿ. ಸುಜೇಂದ್ರ ಅವರು ಖಾಸಗಿ ದೂರು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com