ಕಾಂಗ್ರೆಸ್ ವಿರುದ್ಧ ಬಿಜೆಪಿ ಸಹಿ ಸಂಗ್ರಹ ಶುರು

ಬಿಬಿಎಂಪಿ ಮೇಯರ್ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಅನುಸರಿಸುತ್ತಿರುವ ತಂತ್ರ ಖಂಡಿಸಿ ಭಾನುವಾರ ಬಿಜೆಪಿಯು ಮಲ್ಲೇಶ್ವರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಬಿsಯಾನ ಹಮ್ಮಿಕೊಂಡಿತು...
ಕಾಂಗ್ರೆಸ್ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂ
ಕಾಂಗ್ರೆಸ್ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂ

ಬೆಂಗಳೂರು: ಬಿಬಿಎಂಪಿ ಮೇಯರ್ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಅನುಸರಿಸುತ್ತಿರುವ ತಂತ್ರ ಖಂಡಿಸಿ ಭಾನುವಾರ ಬಿಜೆಪಿಯು ಮಲ್ಲೇಶ್ವರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿತು.

ಅಚ್ಚರಿ ಎಂಬಂತೆ ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಅವರು ಈ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಿಂದ ಸಹಿ ಹಾಕಿಸಿದರು.

ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಜನಾದೇಶ ಸಿಕ್ಕಿದೆ. ಆದರೆ, ಕಾಂಗ್ರೆಸ್ ಸರ್ಕಾರವು ಹಠಮಾರಿ ಧೋರಣೆ ಅನುಸರಿಸಿ ಅಡ್ಡದಾರಿಯಲ್ಲಿ ಅಧಿಕಾರ ಪಡೆದುಕೊಳ್ಳಲು ಹೊರಟಿದೆ ಎಂದು ಟೀಕಿಸಿದರು. ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಜನಾದೇಶ ನೀಡಿದ ಜನರು ಸಹಿ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಬೇಕೆಂದು ಕೋರಿದರು. ಬೆಂಗಳೂರಿನ ಶಾಸಕರು, ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ಜೆಡಿಎಸ್ ಪುರಪಿತೃಗಳು ಗುರುವಾರ ವಾಪಸ್ 
ಕೇರಳದ ಕೊಚ್ಚಿಯಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ಗಳ ತಂಡ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸ ಲಿದೆ. ಕಾಂಗ್ರೆಸ್ ಶಾಸಕರಾದ ಭೈರತಿ ಬಸವ
ರಾಜು ಮತ್ತು ಮುನಿರತ್ನ ನೇತೃತ್ವದ ಪಕ್ಷೇ ತರ ತಂಡ ಕೇರಳದಲ್ಲೇ ವಾಸ್ತವ್ಯ ಮುಂದುವರಿಸಿದೆ.

ಹಾಗೆಯೇ ಅಲ್ಲೇ ದೂರದಲ್ಲಿದ್ದ ಜೆಡಿಎಸ್ ತಂಡ ಈಗ ಇನ್ನೂ ಹತ್ತಿರವಾಗಿದೆ. ಇಷ್ಟೂ ದಿನ ಬೇರೆ ಜಿಲ್ಲೆಗಳಲ್ಲಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಗುಂಪುಗಳು ಈಗ ಬಹುತೇಕ ಹತ್ತಿರಕ್ಕೆ ಬಂದಿದ್ದು, ಇನ್ನು ಕೇಲವೇ ದಿನಗಳಲ್ಲಿ ಒಂದೇ ಕಡೆ ಬಂದು ಸೇರಿದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ ಮೂಲಗಳು ಪ್ರಕಾರ ಸೆ.10ರ ಗುರುವಾರ ಎರಡೂ ತಂಡಗಳು ಒಂದಾಗಿ ಬೆಂಗಳೂರಿಗೆ ಬಂದಿಳಿಯಲಿದ್ದು, ಮರು ದಿನ ನಡೆಯುವ ಪಾಲಿಕೆ ಸಭೆಯಲ್ಲಿ ಭಾಗವಹಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com