
ಬೆಂಗಳೂರು: ಬಿಬಿಎಂಪಿ ಗದ್ದುಗೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೊನೆಗೂ ಅಂತಿಮವಾಗಿದ್ದು, ತನ್ನೆಲ್ಲ ಪಾಲಿಕೆ ಸದಸ್ಯರನ್ನು ಮಡಿಕೇರಿಯಲ್ಲಿರುವ ರೆಸಾರ್ಟ್‍ಗೆ ಕಾಂಗ್ರೆಸ್ ಕಳುಹಿಸಿದೆ.ಮೈತ್ರಿ ಪ್ರಕ್ರಿಯೆಯನ್ನು ಜೆಡಿಎಸ್ ಅಂತಿಮ-ಗೊಳಿಸುತ್ತದೋ, ಕಾಂಗ್ರೆಸ್‍ಗೆ ಕೈ ಕೊಡುತ್ತದೋ ಎಂಬ ಕುತೂಹಲಕ್ಕೆ ಸೋಮವಾರ ಮಧ್ಯಾಹ್ನ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅಂತ್ಯ ಹಾಡಿದ್ದಾರೆ.
ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಾದರೂ ಅಂತಿಮವಾಗಿ ಕಾಂಗ್ರೆಸ್‍ಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು. ಇದರೊಂದಿಗೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ
ಬಿಬಿಎಂಪಿ ಗದ್ದುಗೆ ಪ್ರಹಸನ ತಾರ್ಕಿಕ ಹಂತಕ್ಕೆ ಬಂದಿದ್ದು, ಇದೇ 11ರಂದು ವಿಜಯಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ಅಧಿಕೃತವಾಗಿ ಪ್ರಕಟವಾಗಲಿದೆ.
ರೆಸಾರ್ಟ್‍ನತ್ತ ಕೈ ಚಿತ್ತ: ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಕೆಪಿಸಿಸಿ ಕಚೇರಿ ಯಲ್ಲಿ ನಡೆದ ಸಭೆ ಬಳಿಕ ಕಾಂಗ್ರೆಸ್‍ನ ಎಲ್ಲ ಸದಸ್ಯರನ್ನು ಮೂರು ಬಸ್‍ಗಳಲ್ಲಿ ಮಡಿಕೇರಿ
ಯಲ್ಲಿರುವ ಖಾಸಗಿ ರೆಸಾರ್ಟ್‍ಗೆ ಕಳುಹಿಸಲಾಗಿ ದೆ. ಸೆ. 10ರ ರಾತ್ರಿ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ. ಬಿಜೆಪಿ ಕೊನೆ ಕ್ಷಣದವ ರೆಗೂ ಕಾಂಗ್ರೆಸ್ ಸದಸ್ಯರನ್ನು ಸೆಳೆಯುವುದಕ್ಕೆ
ಪ್ರಯತ್ನ ನಡೆಸಬಹುದೆಂಬ ಕಾರಣಕ್ಕೆ ಅವರನ್ನು ರೆಸಾರ್ಟ್‍ಗೆ ಕಳುಹಿಸಲಾಗಿದೆ.
ರೆಸಾರ್ಟ್ ರೂವಾರಿಗಳು?
ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ರೆಸಾರ್ಟ್ ರಾಜಕಾರಣದ ರೂವಾರಿಗಳಾಗಿ ರೆಡ್ಡಿ ಸೋದರರು ಕಾರ್ಯ ನಿರ್ವಹಿಸಿದ್ದರು.
ಈ ಬಾರಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ನಾಯ್ಡು, ಭೈರತಿ ಸುರೇಶ್ ನೇತೃತ್ವ
Advertisement