ರಾಹುಲ್ ಗಾಂಧಿಗೆ ಅಮೇಥಿಯಲ್ಲೇ ಅಭದ್ರತೆ ಕಾಡುತ್ತಿದೆ: ಮಾಜಿ ಕಾಂಗ್ರೆಸ್ ನಾಯಕ ಹಿಮಂತ

ರಾಹುಲ್ ಗಾಂಧಿ ಬಲವಾದ, ನಿರ್ಣಾಯಕ ನಾಯಕ ಎಂದು ನಟಿಸುತ್ತಿದ್ದಾರೆ. ಅವರಿಗೆ ಅಮೇಥಿಯಲ್ಲೇ ಅಭದ್ರತೆ ಕಾಡುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ...
ಮಾಜಿ ಕಾಂಗ್ರೆಸ್ ನಾಯಕ ಹಿಮಂತ
ಮಾಜಿ ಕಾಂಗ್ರೆಸ್ ನಾಯಕ ಹಿಮಂತ

ಗುವಾಹಟಿ: ಕಾಂಗ್ರೆಸ್ ನಲ್ಲಿ ಕುಟುಂಬ ಕೇಂದ್ರಿತ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದಿದ್ದ ಅಸ್ಸಾಂ ಮಾಜಿ ಸಚಿವ ಹಿಮಂತ ಬಿಸ್ವ ಶರ್ಮ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರನ್ನು ವಜಾಗೊಳಿಸುವುದಕ್ಕಾಗಿ ಬೇಡಿಕೆ ಮುಂದಿಟ್ಟಾಗ ಮುಖ್ಯಮಂತ್ರಿಯನ್ನು ಬದಲಾಯಿಸುವುದು ತಮ್ಮ ವಿಶೇಷಾಧಿಕಾರ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ಶಾಸಕರಿಗೆ ಇಲ್ಲವೇ ಎಂದು ಹಿಮಂತ ಬಿಸ್ವ ಶರ್ಮ ಪ್ರಶ್ನಿಸಿದ್ದಾರೆ. ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಅಧಿಕಾರವಿದ್ದರೆ  ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ತೀರ್ಮಾನ ಹೇಗೆ ಅಂತಿಮವಾಗುತ್ತದೆ ಎಂದು ಹಿಮಂತ ಕೇಳಿದ್ದಾರೆ.

ರಾಹುಲ್ ಗಾಂಧಿ ಬಲವಾದ, ನಿರ್ಣಾಯಕ ನಾಯಕ ಎಂದು ನಟಿಸುತ್ತಿದ್ದಾರೆ. ಅವರಿಗೆ ಅಮೇಥಿಯಲ್ಲೇ ಅಭದ್ರತೆ ಕಾಡುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು ಹಿಮಂತ ಬಿಸ್ವ ಶರ್ಮ ವಾಗ್ದಾಳಿ ನಡೆಸಿದ್ದಾರೆ. ಅಸ್ಸಾಂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶರ್ಮ, ಕಾಂಗ್ರೆಸ್ ನಲ್ಲಿರುವ ಕುಟುಂಬ ರಾಜಕಾರಣದಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com