ಅಹಿಂದಕ್ಕೆ ಪ್ರತಿಯಾಗಿ ಜೈ ಹಿಂದ್

ಅಹಿಂದ ಟ್ರಂಪ್ ಕಾರ್ಡ್ ಪ್ರಯೋಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದೇ ಟ್ರಂಪ್‍ಕಾರ್ಡ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಹಿಂದ ಟ್ರಂಪ್ ಕಾರ್ಡ್ ಪ್ರಯೋಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದೇ ಟ್ರಂಪ್‍ಕಾರ್ಡ್ ಅನ್ನು ಪ್ರತಿಯಾಗಿ ಪ್ರಯೋಗಿಸಲು ಬಿಜೆಪಿ ತಂತ್ರ ರೂಪಿಸಿದೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಈ ಕುರಿತಂತೆ ಮಹತ್ವದ ಸಭೆ ನಡೆಯಿತು. ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಬಿಜೆಪಿ ಪದಾಧಿಕಾರಿಗಳು ಪಾಲ್ಗೊಂಡು ಚರ್ಚೆ ನಡೆಸಿದರು.

ಅಹಿಂದ ವರ್ಗದವರ ದನಿಯಾಗಿ ಮತ್ತು ರಾಜ್ಯ ಸರ್ಕಾರದ ಅಹಿಂದ ವಿರೋಧಿ ನಿಲುವು ಖಂಡಿಸಿ ಜೈಹಿಂದ್ ಅಭಿಯಾನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಕ್ಟೋಬರ್ 15 ರಿಂದ ನವೆಂಬರ್ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಅಹಿಂದ ಸಮಾವೇಶ ನಡೆಸುವ ಮೂಲಕ ಪ್ರತಿ ಕ್ಷೇತ್ರದಲ್ಲೂ ಅಹಿಂದ ವರ್ಗದವರ ಸಂಘಟನೆಗೆ ಒತ್ತು ನೀಡಲಿದೆ. ಜೊತೆಗೆ ಅಹಿಂದ ನಾಯಕರ ಪಕ್ಷಕ್ಕೆ ಸೆಳೆತ, ಅಹಿಂದ ವರ್ಗದವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ, ಹಿಂದುಳಿದ ವರ್ಗದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅಧ್ಯಯನ, ಸರ್ಕಾರದ ಘೋಷಿತ ಭರವಸೆಗಳ ಅನುಷ್ಠಾನ ಕುರಿತು ವರದಿ ಸಿದಟಛಿಪಡಿಸುವುದು,ಹಾಸ್ಟೆಲ್ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮತ್ತು ಹಣ ದುರ್ಬಳಕೆ ಪ್ರಕರಣಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುವ ನಿರ್ಧಾರಕ್ಕೆ ಬರಲಾಯಿತು.

ಸಭೆ ನಂತರ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಅಹಿಂದ ವರ್ಗಕ್ಕೆ ಮುಖ್ಯಮಂತ್ರಿ
ಸಿದ್ದರಾಮಯ್ಯನವರು ಬಜೆಟ್‍ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಪೈಕಿ ಶೇ.45ರಷ್ಟು ಅನುಷ್ಠಾನವಾಗಿಲ್ಲ. ತಕ್ಷಣವೇ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ಕೊಟ್ಟ  ಕಾರ್ಯಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದರು. ಇಂದು ಸಿಎಂ ಸಿದ್ದರಾಮಯ್ಯ ಕೇವಲ ಇಬ್ರಾಹಿಂ,ಮಹದೇವಪ್ಪ, ಮಹದೇವಪ್ರಸಾದ್ ಹೆಸರು ಹೇಳೋಕೆ ಆರಂಭಿಸಿದ್ದಾರೆ ಎಂದು ಟೀಕಿಸಿದ ಅವರು, ಹಾಸಿಗೆ ದಿಂಬು ಖರೀದಿ ಅವ್ಯವಹಾರದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಸ್ಪಷ್ಟಪಡಿಸಬೇಕು ಎಂದರು.

ಆಂತರಿಕ ಚುನಾವಣೆ ರಾಜ್ಯ ಬಿಜೆಪಿ ಸಂಘಟನಾತ್ಮಕ ಪುನಾರಚನೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾಧಿಕಾರಿಯನ್ನಾಗಿ ವಿಧಾನಪರಿಷತ್ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಅವರನ್ನು ನೇಮಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಗುರುವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಸಾಂಸ್ಥಿಕ ಚುನಾವಣೆ ಕುರಿತಂತೆ
ಚರ್ಚೆ ನಡೆಯಿತು. ಅಲ್ಲದೇ ನ. 30ರೊಳಗೆ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರ ನೇಮಕ
ಪ್ರಕ್ರಿಯೆ ಮುಗಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com