
ಬೆಂಗಳೂರು/ ಕೋಲಾರ: ನೀರು ಬೇಕು ಎಂದರೇ ತಮಿಳುನಾಡು ಸರ್ಕಾರ ಅಣೆಕಟ್ಟು ಕಟ್ಟಿಕೊಂಡು ನೀರು ಸಂಗ್ರಹಿಸಿಕೊಳ್ಳಲಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬೆ ಜಯಚಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕಾವೇರಿ ನದಿ ಪಾತ್ರದಲ್ಲಿ ಮಳೆ ಕೊರತೆಯಿದೆ. ಸಂಗ್ರಹಿತ ನೀರನ್ನು ಕುಡಿಯಲು ಮೀಸಲಿಡುವ ಅನಿವಾರ್ಯತೆಯಿದೆ. ರಾಜ್ಯದ ರೈತರ ಬೆಳೆಗೆ ನೀರು ಹರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ
ಕರ್ನಾಟಕದಲ್ಲಿ ಡ್ಯಾಮ್ ನಿರ್ಮಿಸಿರುವುದು ತಮಿಳುನಾಡಿಗೆ ನೀರು ಬಿಡುವ ಉದ್ದೇಶಕ್ಕೆಂದು ಆ ರಾಜ್ಯ ಭಾವಿಸಬಾರದು. ಬದಲಾಗಿ ಮಳೆ ನೀರು ಸಂಗ್ರಹಿಸಲು ತನ್ನ ನೆಲದಲ್ಲೆ ತಮಿಳುನಾಡು ಡ್ಯಾಮ್ ಕಟ್ಟಿಕೊಳ್ಳಲಿ ಎಂದು ಅವರು ನೀಡಿದ್ದಾರೆ.
ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ತಮಿಳುನಾಡು ಕೂಡ ಡ್ಯಾಮ್‌ಗಳನ್ನು ಕಟ್ಟಿಕೊಳ್ಳಬೇಕು. ಹೊಗೇನಕಲ್‌ನಲ್ಲೇ ಅದು ಅಣೆಕಟ್ಟೆ ನಿರ್ಮಿಸಿಕೊಳ್ಳಲಿ. ಇನ್ನೂ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಡ್ಯಾಮ್ ನಿರ್ಮಾಣ ಮಾಡಲಿ. ವಿದ್ಯುತ್ ಉತ್ಪಾದನೆಯನ್ನೂ ಮಾಡಿಕೊಳ್ಳಲಿ ದು ಹೇಳಿದರು. ಕಾವೇರಿ ನೀರು ಪಡೆದುಕೊಳ್ಳಲು ತಮಿಳುನಾಡಿನ 6 ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗಿದೆ. ಆದರೆ, ಇಂತಹ ಒತ್ತಡ ತಂತ್ರ ಫಲಿಸುವುದಿಲ್ಲವೆಂದು ಎಚ್ಚರಿಕೆ ಕೊಟ್ಟರು.
ಇನ್ನು ತಮಿಳುನಾಡು ಬಂದ್ ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ನಮ್ಮ ಕತ್ತನ್ನು ಸೀಳಿ ರಕ್ತ ಕೊಡುತ್ತೀವಿ, ಆದರೆ ತಮಿಳುನಾಡಿಗೆ ನೀರು ಮಾತ್ರ ಬಿಡುವುದಿಲ್ಲ ಎಂದು ಕೋಲಾರದಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕುಡಿಯಲು ನೀರು ಇಲ್ಲ. ಬರದಿಂದ ರಾಜ್ಯ ತತ್ತರಿಸುತ್ತಿದೆ. ಇಂಥ ವೇಳೆ ತಮಿಳುನಾಡು ಕಾವೇರಿ ನೀರು ಬಿಡುವಂತೆ ಬಂದ್ ಗೆ ಕರೆಕೊಟ್ಟಿರುವುದು ದುರಾದೃಷ್ಟಕರ ಎಂದು ಹೇಳಿದರು.
Advertisement