ನಿಮಗೆ ಏನಾದರೂ ಸಮಸ್ಯೆ ಇದ್ದರೆ ನನಗೆ ಕರೆ ಮಾಡಿ: ಮಾಜಿ ಸಂಸದೆ ರಮ್ಯಾ

ನಿಮಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ಮೊಬೈಲ್ ನಂಬರ್ ಗೆ ಮಿಸ್ ಕಾಲ್ಡ್ ಕೊಡಿ, ನಾನು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ. ಎಲ್ಲರೂ, ನನ್ನ ನಂಬರ್ ಸೇವ್ ಮಾಡಿಕೊಳ್ಳಿ ...
ರಮ್ಯಾ
ರಮ್ಯಾ
Updated on

ಪಾಂಡವಪುರ (ಮಂಡ್ಯ): ನಿಮಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ಡ್ ಕೊಡಿ, ನಾನು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ. ಎಲ್ಲರೂ, ನನ್ನ ನಂಬರ್ ಸೇವ್ ಮಾಡಿಕೊಳ್ಳಿ ಎಂದು ಮಾಜಿ ಸಂಸದೆ ರಮ್ಯಾ ತಮ್ಮ ಕ್ಷೇತ್ರದ ಜನರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಾರೆ.

ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರಿನಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದ ಅವರು, ಸಾರ್ವಜನಿಕರಿಗೆ ತೊಂದರೆಯಾದರೆ ಮಿಸ್ ಕಾಲ್ಡ್ ಕೊಡಿ. ಕೂಡಲೇ ಆ ನಂಬರ್​ನಿಂದ ನಿಮಗೆ ಸಂದೇಶ ಬರುತ್ತದೆ’ ಎಂದು ಹೇಳಿದರು.

ಈಗಾಗಲೇ ಮಂಡ್ಯದಲ್ಲಿ ಕಚೇರಿ ನೋಡಲಾಗಿದೆ. ಜಿಪಂ ಮತ್ತು ತಾಪಂ ಚುನಾವಣೆ ಮುಗಿಯುವ ತನಕ ಮಂಡ್ಯದಲ್ಲಿಯೇ ಇದ್ದು, ಎಲ್ಲ ತಾಲೂಕುಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದರು. ಇದರಿಂದ ತಮ್ಮ ದೂರವಾಣಿ ಸಂಖ್ಯೆ ನೀಡುವ ಮೂಲಕ ಜಿಲ್ಲೆಯ ರಾಜಕೀಯದಲ್ಲಿ ಇನ್ನಷ್ಟು ಸಕ್ರಿಯವಾಗುವ ಸುಳಿವನ್ನು ರಮ್ಯಾ ನೀಡಿದಂತಾಗಿದೆ.

ಇನ್ನು ಮೊಬೈಲ್ ಸಂಖ್ಯೆ ನೀಡಿದ ಕೂಡಲೇ ಸಾರ್ವಜನಿಕರು ಮಿಸ್ ಕಾಲ್ಡ್ ಕೊಡಲು ಪ್ರಾರಂಭಿಸಿದರು. ಕೂಡಲೇ ಕರೆ ಮಾಡಿದವರಿಗೆ ‘ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಾನು ನಿಮ್ಮ ಜತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕರೆ ಮಾಡುತ್ತೇವೆ’ ಎಂಬ ಮುದ್ರಿತ ಸಂದೇಶ ಕೇಳಿ ಜನ ದಂಗಾದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com