
ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕಾಲ್ಗುಣ ಸರಿಯಿಲ್ಲ, ಅವರು ಮಂಡ್ಯಕ್ಕೆ ಕಾಲಿಟ್ಟ ನಂತರ ರೈತರು ನಿರಂತರವಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ರಮ್ಯಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರಮ್ಯಾ ಅವರು ಕಾಲಿಟ್ಟ ನಂತರ ಮಂಡ್ಯದಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ರಮ್ಯಾ ಕಾಲಿಟ್ಟ ನಂತರ ರೈತರು ಆತ್ಮಹತ್ಯೆಯ ಸರಣಿ ಇಲ್ಲಿ ಆರಂಭವಾಯಿತು. ಇದು ಈ ಕ್ಷೇತ್ರದ ಜನತೆಗೆ ರಮ್ಯಾ ಕೊಟ್ಟ ಬಳುವಳಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಚುನಾವಣೆಯ ಸಮಯದಲ್ಲಿ ಬಂದು ರೈತರ ಕಷ್ಟ ಸುಖ ವಿಚಾರಿಸುವುದು ಇದು ಯಾವ ರೀತಿಯ ರಾಜಕೀಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ನಿರಂತರವಾಗಿ ರೈತರ ಪರವಾದ ಹೋರಾಟ ಮಾಡುತ್ತಲೇ ಬರುತ್ತಿದೆ. ಇದರ ಅರಿವು ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತಿಳಿಯಲಿದೆ ಎಂದು ಹೇಳಿದರು.
Advertisement