

ಬೆಂಗಳೂರು: ಅಸಮರ್ಥ ಸಚಿವರನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಕೆಂಡಾ ಮಂಡಲವಾಗಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ್ ಪ್ರಸಾದ್ ನಾನು ಸಿದ್ದರಾಮಯ್ಯ ನನ್ನು ಕೇಳಿಕೊಂಡು ಮಂತ್ರಿಯಾಗಿಲ್ಲ. ಸಿದ್ದರಾಮಯ್ಯ ಗಿಂತ ನಾನು ಸೀನಿಯರ್ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ವಾಜಪೇಯಿ ಸಂಪುಟದಲ್ಲಿ ಮಂತ್ರಿಯಾಗಿದ್ದವನು, ನಾನು ಇದ್ದರೇ ಸಿದ್ದರಾಮಯ್ಯ ಸಂಪುಟಕ್ಕೆ ಒಂದು ಗೌರವ ಎಂದು ಕಿಡಿಕಾರಿದ್ದಾರೆ.
ಇನ್ನು ಮಾಜಿ ಸಂಸದ ವಿಶ್ವನಾಥ್ ಅವರ ವಿಷಯವಾಗಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಮಂತ್ರಿಗಳು ಎಲ್ಲೆಲ್ಲಿಗೆ ಹೋಗ್ತಾರೆ ಎಂಬುದನ್ನು ಅವರಿಗೆ ವರದಿ ಮಾಡುವ ಅಗತ್ಯವಿಲ್ಲ, ವಿಶ್ವನಾಥ್ ಗೆ ಪ್ರಚಾರದ ಹುಚ್ಚು. ಹೀಗಾಗಿ ಅವನು ಮಾಧ್ಯಮದವರನ್ನು ಬಿಟ್ಟು ಹೋಗಲ್ಲ ಎಂದು ಲೇವಡಿ ಮಾಡಿದರು.