

ಬೆಂಗಳೂರು: ಪ್ರವಾಸಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಬೆಲ್ಜಿಯಂನಲ್ಲಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಪ್ರೀತಿಯ ಪುತ್ರ ರಾಕೇಶ್ ನೋಡಲು ಸಿದ್ದರಾಮಯ್ಯ ಪತ್ನಿಯೊಂದಿಗೆ ಬೆಲ್ಜಿಯಂಗೆ ತೆರಳಿದ್ದಾರೆ. ಇದೇ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ರಾಕೇಶ್ ಅರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚನೆಯಂತೆ ಬೆಲ್ಜಿಯಂ ಭಾರತೀಯ ರಾಯಭಾರ ಕಚೇರಿಯಿಂದ ರಾಕೇಶ್ ಅವರನ್ನು ಬ್ರಸೆಲ್ಸ್ ಯುನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ನಂತರ ಸಿದ್ದರಾಮಯ್ಯ ಪತ್ನಿ ಜೊತೆ ಬೆಲ್ಜಿಯಂಗೆ ತೆರಳಿದ್ದಾರೆ.