ಸಂಪುಟದಿಂದ ಕಿಮ್ಮನೆ ರತ್ನಾಕರ್ ಔಟ್: ಫೇಸ್ ಬುಕ್ ನಲ್ಲಿ ವಿದಾಯ ಭಾಷಣ

ಸಂಪುಟ ಪುನಾರಚನೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ಬೆನ್ನಲ್ಲೇ ಕಿಮ್ಮನೆ ರತ್ನಾಕರ್ ತಮ್ಮ ಫೇಸ್ ಬುಕ್ ಪುಟದಲ್ಲಿ ವಿದಾಯ ಭಾಷಣ ಹೇಳಿದ್ದಾರೆ!
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್
Updated on

ಬೆಂಗಳೂರು: ಸಂಪುಟ ಪುನಾರಚನೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸಚಿವ ಸಂಪುಟದಿಂದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ 13 ಮಂದಿಯನ್ನು ಕೈ ಬಿಡಲಾಗಿದೆ. ಈ ಬೆನ್ನಲ್ಲೇ ಕಿಮ್ಮನೆ ರತ್ನಾಕರ್ ತಮ್ಮ ಫೇಸ್ ಬುಕ್ ಪುಟದಲ್ಲಿ ವಿದಾಯ ಭಾಷಣ ಹೇಳಿದ್ದಾರೆ!

ವಿದಾಯ ಭಾಷಣ
ಎಲ್ಲಾ ಗೆಳೆಯರಿಗೆ ಧನ್ಯವಾದಗಳು ಕಳೆದ ಎರಡು ಮೂರು ದಿನಗಳಿಂದ ಸಂಪುಟ ಪುನರ್ ರಚನೆ ವಿಷಯಕ್ಕೆ ಸಂಭಂದಿಸಿದ ಹಾಗೆ ಹಲವಾರು ಗೆಳೆಯರು ಆತಂಕ ವ್ಯಕ್ತ ಪಡೆಸಿದ್ದರು
ಹಲವರು ಫೋನ್ ಮುಖಾಂತರ ಇನ್ನು ಹಲವರು ಮೆಸೇಜ್ ಮೂಲಕ ಸಂವಹನ ನಡೆಸಿದ್ದರು ಎಲ್ಲರ ಕಾಳಜಿಗೆ ಧನ್ಯವಾದಗಳು..ಯವ್ವನದ ದಿನದಿಂದಲೂ ನಾನು ಸಾರ್ವಜನಿಕ ಜೀವನದಲ್ಲಿ ಇದ್ದೆ ಆಗ ನನ್ನ ಸಹೋದರರು ನನಗೆ ಪ್ರೀತಿಯಿಂದ ಗದರಿದ್ದರು ..ವಕೀಲ ವೃತ್ತಿಯಲ್ಲೂ ನಾನು ವೃತ್ತಿಯನ್ನು ಲಾಭದಾಯಕ ವಾಗಿ ಪರಿಗಣಿಸಲಿಲ್ಲ ಎಂದು ಸಹೋದ್ಯೋಗಿಗಳು, ಸ್ನೇಹಿತರು ಸ್ನೇಹದಿಂದ ಗದರಿಸಿದ್ದರು..ಹೋರಾಟ ದಿಂದ ರಾಜಕಾರಣ ಮಾಡಿ ರಾಜಕಾರಣದಲ್ಲಿದ್ದು ಹೋರಾಟ ಮಾಡಿದ್ದೆ ..ವಿರೋಧಿ ಮಿತ್ರರು ನನ್ನನ್ನು ಇನ್ ಶರ್ಟ ರಾಜಕಾರಣಿ ವೈಟ್ ಕಾಲರ್ ರಾಜಕಾರಣಿ ಎಂದು ರಾಜಕೀಯ ವಾಗಿ ಗದರಿದ್ದರು..ಹೋರಾಟ ಮಾಡಿ ಗೆದ್ದೆ.. ಗೆದ್ದು ಹೋರಾಟ ಮಾಡಿದೆ ..ಯಾರ ಕೈಯಲ್ಲೂ ಹೇಳಿಸದೇ ಲಾಭಿ ಮಾಡದೆ ಅಧಿಕಾರ ಬಂದಿತು ..ಲಾಬಿಯಿಂದ ಅಧಿಕಾರ ಉಳಿಸಿಕೊಳ್ಳಲು ನಾನು ಶಕ್ತನೂ ಅಲ್ಲ ಆಸಕ್ತನೂ ಅಲ್ಲ..ನನ್ನನ್ನ ನಂಬಿ ವರಿಷ್ಠರು ಹಾಗು ಹಿರಿಯರು ಅವಕಾಶವನ್ನು ನೀಡಿದರು.. ಎಷ್ಟು ಸಾಧ್ಯವೋ ಅದಕ್ಕೂ ಮಿಗಲಾಗಿ ಸಿಕ್ಕ ಅವಕಾಶಕ್ಕೆ ,ಅಧಿಕಾರಕ್ಕೆ ಪಕ್ಷಾತೀತವಾಗಿ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೇನೆ..ತೀರ ಕಳಂಕ ಹೊತ್ತು ನಿಷ್ಕ್ರಿಯ ಎಂಬ ಮಾತನ್ನು ಕೇಳಲಿಲ್ಲ..ಓಂದು ಮಾತು ಹೇಳಬಲ್ಲೆ ಕೆಲವೊಮ್ಮೆ ಕೆಲವೊಂದು ನಿರ್ಧಾರಗಳು ಕೆಲವರಿಗೆ ಪಥ್ಯವಾಗಿರಲಿಕ್ಕಿಲ್ಲ..ಕೆಲವೊಂದು ನಿಷ್ಠೂರ ನಡೆಗಳಿಂದ ಅಹಂಕಾರಿ ಅನಿಸಿಕೊಂಡಿದ್ದಿದೆ, ಆದರೆ ಮರುಮಾತಿನಲ್ಲೇ ಪ್ರಾಮಾಣಿಕ ಎಂದು ಹೇಳಿಸಿ ಕೊಂಡು ಧನ್ಯತಾ ಭಾವನೆ ಅನುಭವಿಸಿದ ಉದಾಹರಣೆ ಗಳೂ ಇವೆ..ಹತಾಶ ಮನಸ್ಥಿತಿ ನನ್ನದಲ್ಲ..ಬಯಸದೇ ಹಲವಾರು ಅವಕಾಶ ವ್ಯವಸ್ಥೆ ನನಗೆ ನೀಡಿದೆ ಪ್ರತಿಯೊಬ್ಬರ ಸಾನಿಧ್ಯವೂ ನನಗೆ ಸಂಪೂರ್ಣ ತೃಪ್ತಿ ತಂದಿದೆ..ಕೆಲವರು ಪ್ರೀತಿಯಿಂದ ಹರಸಿ ಹಾರೈಸಿದರೆ ಇನ್ನು ಕೆಲವರು ಅದೇ ಪ್ರೀತಿಯಿಂದ ತುಸು ಪ್ರೀತಿಯಿಂದಲೇ ಗದರಿದ್ದಾರೆ, ಟೀಕಿಸಿದ್ದಾರೆ.. ಈ ಎಲ್ಲರೂ ವಯುಕ್ತಿಯ ಮಟ್ಟದಲ್ಲಿ ನನಗೆ ಮಾನ್ಯರೇ..ಪಕ್ಷದ ವಿಷಯದಲ್ಲಿ ನಾನು ಶಿಸ್ತಿನ ಕಾರ್ಯಕರ್ತ.. ನೀಡಿದ ಜವಾಬ್ದಾರಿ ನಾನು ನಿರ್ವಹಿಸಿದ್ದೇನೆ ಇನ್ನೂ ಮುಂದೆಯೂ ನಿರ್ವಹಿಸುವ ವಿಶ್ವಾಸ ವಿದೆ..ನನ್ನ ಪ್ರತಿ ಹಂತದ ಬೆಳವಣಿಗೆಗೆ ಸಹಕರಿಸಿದ ಪ್ರತಿಯೂಬ್ಬರಿಗೂ ಧನ್ಯವಾದಗಳು..ನಾನು ನನ್ನಂತೆ ಸದಾ ಕಾಲ ನಿಮ್ಮಗಳ ಜೊತೆಯಲ್ಲಿ ಇರುವೆ ಅದಕ್ಕೆ ಅವಕಾಶ ನೀವು ನೀಡುತ್ತೀರ..ಸ್ಥಾನ ಮಾನಗಳು ಗೂಟದ ಕಾರಿನಲ್ಲಿ ಇರುವುದು ಎಂಬ ನಂಬಿಕೆ ನಿಮ್ಮಂತೆ ನನಗೂ ಇಲ್ಲ..

ಎಂದೆಂದಿಗೂ ನಿಮ್ಮ ಸ್ನೇಹಿತ...
ಕಿಮ್ಮನೆ ರತ್ನಾಕರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com