ಸಿಎಂ ಸಿದ್ದರಾಮಯ್ಯ ವಿಶ್ವಾಸಘಾತುಕ: ಶ್ರೀನಿವಾಸ್ ಪ್ರಸಾದ್ ಆಕ್ರೋಶ

ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದು ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತ ...
ಸಿದ್ದರಾಮಯ್ಯ ಮತ್ತು ಶ್ರೀನಿವಾಸ್ ಪ್ರಸಾದ್
ಸಿದ್ದರಾಮಯ್ಯ ಮತ್ತು ಶ್ರೀನಿವಾಸ್ ಪ್ರಸಾದ್

ಮೈಸೂರು: ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದು ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೂಡಲ ಸಂಗಮದಲ್ಲಿ ನಡೆದ ಅಹಿಂದ ರ್ಯಾಲಿಯಲ್ಲಿ ನಾನು ಸಿದ್ದರಾಮಯ್ಯ ಅವರನ್ನು ಪರಿಚಯಿಸಿದೆ,  ನಂತರ ಜೆಡಿಎಸ್ ನಿಂದ ಸಿದ್ದರಾಮಯ್ಯ ಅವರನ್ನು ಕಿತ್ತೆಸೆಯಲಾಯಿತು. ತಮಗೆ ಹಿಂದೆ ಸಹಾಯ ಮಾಡಿದವರನ್ನು ಸಿದ್ದರಾಮಯ್ಯ ಯಾವತ್ತೂ ನೆನಪಿಸುವುದಿಲ್ಲ, ಅವರೊಬ್ಬ ವಿಶ್ವಾಸ ಘಾತುಕ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಯಾವುದೇ ಸಚಿವರು ಒಳ್ಳೆಯ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡಿದಾಗ ಅವರನ್ನು ಹೊಗಳುವುದಿಲ್ಲ, ಬೆನ್ನು ತಟ್ಟಿ ಪ್ರೋತ್ಸಾಹಿಸುವುದಿಲ್ಲ, ನನ್ನ ಭೂಸುಧಾರಣೆ ಮಸೂದೆ ಬಗ್ಗೆ ಸಂಪುಟ ಸಹೋದ್ಯೋಗಿಗಳು ಸಿದ್ದರಾಮಯ್ಯ ಅವರಿಗೆ ತಿಳಿಸಿದಾಗ ಒಂದು ಮೆಚ್ಚುಗೆಯ ಮಾತನ್ನು ಆಡಲಿಲ್ಲ. ಯಾರೊಬ್ಬ ಸಚಿವರ ಜೊತೆಯು ಸಿಎಂ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ಅವರಿಗೆ ಪಕ್ಷ ಮುಖ್ಯವಲ್ಲ, 5 ವರ್ಷ ಸಿಎಂ ಸ್ಥಾನದಲ್ಲಿ ಕೂರುವುದಷ್ಟೇ ಅವರ ಉದ್ದೇಶ. 2006ರ ಉಪ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರೊಡನೆ ನನ್ನ ಮನೆಗೆ ಬಂದ ಕಾಂಗ್ರೆಸ್ ಗೆ  ಸೇರಿಸಿಕೊಳ್ಳಲು  ನನ್ನ ಬಳಿ
ಮನವಿ ಮಾಡಿದರು. ಈ ಹಿಂದೆ ಎಷ್ಟೋ ಜನ ನನ್ನ ಬಳಿ ಬಂದು ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ನವರಿಗೆ ಸಹಾಯ ಮಾಡದೇ ಇರಲು ಆಗಲಿಲ್ಲ. ಹಿಂದೆ ನಾನು ಮಾಡಿರುವ ಸಹಾಯವನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳಬೇಕು ಎಂದು ಚಾಟಿ ಬೀಸಿದ್ದಾರೆ.

ಸಚಿವ ಸ್ಥಾನದಿಂದ ನನ್ನನ್ನು ಕೈ ಬಿಡುವ ನಿರೀಕ್ಷೆ ಇರಲಿಲ್ಲ. ಕೈಬಿಟ್ಟಿರುವ ಬಗ್ಗೆ ಬೇಸರವೂ ಇಲ್ಲ. ಆದರೆ, ಈ ಬಗ್ಗೆ ನನ್ನ ಬಳಿ ಚರ್ಚಿಸದಿರುವುದು ಮನಸ್ಸಿಗೆ ನೋವಾಗಿದೆ’ ಎಂದರು. ‘ಸಿದ್ದರಾಮಯ್ಯ ಅವರು ಪ್ರಾಮಾಣಿಕರಿಗೆ ಗೌರವ ಕೊಡುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com