ಮಾತು ಉಳಿಸಿಕೊಂಡ ಶಾಮನೂರು: ಬೆಂಜ್ ಖರೀದಿ

ಸಚಿವ ಸ್ಥಾನ ಉಳಿದರೆ ಇನ್ನೋವಾ ಕಾರಿನಲ್ಲಿ ಓಡಾಡುವೆ, ಕೈಬಿಟ್ಟರೆ ಬೆಂಜ್ ಕಾರ್ ಹತ್ತುವೆ ಎಂದು ಹೇಳಿದ್ದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟ ಮಾತನ್ನು...
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೊಸ ಬೆಂಜ್ ಕಾರು
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೊಸ ಬೆಂಜ್ ಕಾರು
Updated on: 

ದಾವಣಗೆರೆ: ಸಚಿವ ಸ್ಥಾನ ಉಳಿದರೆ ಇನ್ನೋವಾ ಕಾರಿನಲ್ಲಿ ಓಡಾಡುವೆ, ಕೈಬಿಟ್ಟರೆ ಬೆಂಜ್ ಕಾರ್ ಹತ್ತುವೆ ಎಂದು ಹೇಳಿದ್ದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟ ಮಾತನ್ನು ಗುರುವಾರ ಉಳಿಸಿಕೊಂಡಿದ್ದಾರೆ.

ಸಂಪುಟ ಪುನಾರಚನೆ ಕುರಿತಂತೆ ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಮನೂರು ಶಿವಶಂಕಪ್ಪ ಅವರು, ಪ್ರಸ್ತುತ ನಾನು ಇನ್ನೋವಾ ಕಾರಿನಲ್ಲಿ ಓಡಾಡುತ್ತಿದ್ದೇನೆ. ಒಂದು ವೇಳೆ ಸಚಿವ ಸ್ಥಾನದಿಂದ ನನ್ನನ್ನು ಕೈ ಬಿಟ್ಟರೆ ಬೆಂಜ್ ಕಾರಿನಲ್ಲಿ ಓಡಾಡುತ್ತೇನೆಂದು ಹೇಳಿಕೊಂಡಿದ್ದರು.

ಇದೀಗ ಹೇಳಿದಂತೆ ನಡೆದುಕೊಂಡಿರುವ ಶಾಮನೂರು ಅವರು ರು.60 ಲಕ್ಷ ಬೆಲೆಯ ಬಿಳಿ ಬಣ್ಣದ ಬ್ರ್ಯಾಂಡ್ ನ್ಯೂ ಬೆಂಜ್ ಕಾರನ್ನು ಖರೀದಿಸಿದ್ದಾರೆ. ಕಾರು ಖರೀದಿ ಬಳಿಕ ಇದೇ ಕಾರಿನಲ್ಲಿ ಶಾಮನೂರು ಅವರು ತಮ್ಮ ಪುತ್ರ ಎಸ್ಎಸ್. ಮಲ್ಲಿಕಾರ್ಜುನ ಅವರ ಜೊತೆಯಲ್ಲಿ ದಾವಣಗೆರೆಗೆ ಪ್ರಯಾಣ ನಡೆಸಿದ್ದರು.

ಶಿವಶಂಕರಪ್ಪ ಅವರಿಗೆ ಕಾರುಗಳ ಮೇಲೆ ಕ್ರೇಜ್ ಇಲ್ಲ. ಬಾಪೂಜಿ ವಿದ್ಯಾಸಂಸ್ಥೆ ಕಚೇರಿಗೆ, ತಮ್ಮ ಅಂಗಡಿಗೆ ಹೋಗಬೇಕಾದರೆ ಅಂಬಾಸಿಡರ್ ಕಾರನ್ನು ಬಳಸುತ್ತಿದ್ದರು. ಪರ ಊರುಗಳಿಗೆ ಹೋಗಲು ಹೆಲಿಕಾಪ್ಟರ್ ಉಪಯೋಗಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com