ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಅನುದಾನ ಮೀಸಲು: ಸಚಿವ ರಮೇಶ್ ಕುಮಾರ್

ಮುಂಬರುವ ಬಜೆಟ್ ನಲ್ಲಿ ಒಟ್ಟು ಹಣದಲ್ಲಿ ಶೇಕಡಾ 15ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿಡಲು ....
ಕೆ.ಆರ್.ರಮೇಶ್ ಕುಮಾರ್
ಕೆ.ಆರ್.ರಮೇಶ್ ಕುಮಾರ್
ಬೆಂಗಳೂರು: ಮುಂಬರುವ ಬಜೆಟ್ ನಲ್ಲಿ ಒಟ್ಟು ಹಣದಲ್ಲಿ ಶೇಕಡಾ 15ರಷ್ಟು ಅಲ್ಪಸಂಖ್ಯಾತರಿಗೆ ಮೀಸಲಿಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಅವುಗಳಲ್ಲಿ ಶೇಕಡಾ 10ರಷ್ಟು ಮುಸಲ್ಮಾನರಿಗೆ. ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ನಿನ್ನೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನದ ಸಂದರ್ಭದಲ್ಲಿ ವಿವಿಧ ಅಲ್ಪಸಂಖ್ಯಾತ ಸಂಘಟನೆಗಳು ನೀಡಿದ ಮನವಿಯನ್ನು ಸ್ವೀಕರಿಸಿದರು.
ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಉದ್ಧಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ಇರುವ ಸಂಪುಟ ಉಪ ಸಮಿತಿಯ ನೇತೃತ್ವವನ್ನು ರಮೇಶ್ ವಹಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್ ನ ಅನುದಾನದಲ್ಲಿ ಶೇಕಡಾ 15ರಷ್ಟನ್ನು ಮೀಸಲಿಡಲು ಪ್ರಸ್ತಾವನೆಯಿದ್ದು ಅವುಗಳಲ್ಲಿ ಶೇಕಡಾ 10ರಷ್ಟು ಮುಸಲ್ಮಾನರಿಗೆ ಮೀಸಲಿಡಲಾಗುವುದು. ಉಳಿದವು ಕ್ರಿಸ್ತಿಯನ್ನರು, ಸಿಖರು ಮತ್ತು ಪ್ಯಾರಿಸ್ ಧರ್ಮದವರಿಗೆ. ಈ ಬಗ್ಗೆ ನಾವು ಪರಿಶೀಲನೆ ನಡೆಸಬೇಕಾಗಿದೆ ಎಂದು ಹೇಳಿದರು.
ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಆ ಹಣವನ್ನು ಬಳಸದಿದ್ದರೆ ಮುಂದಿನ ವರ್ಷಕ್ಕೆ ಅದನ್ನು ಮುಂದುವರಿಸಲು ಕೂಡ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಜನವರಿ ಕೊನೆ ವಾರದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com