ಎಚ್.ಆರ್. ಶ್ರೀನಾಥ್
ರಾಜಕೀಯ
ಕೊಪ್ಪಳ: ಮೂಲ-ವಲಸಿಗ ಕಿತ್ತಾಟ, ಮಾಜಿ ಎಂಎಲ್‍ಸಿ ಶ್ರೀನಾಥ್ ಕಾಂಗ್ರೆಸ್ ಗೆ ರಾಜೀನಾಮೆ
"ಸಿದ್ದರಾಮಯ್ಯ ಹಿಟ್ಲರ್ ಇದ್ದ ಹಾಗೆ. ನಾಲ್ಕು ವರ್ಷಗಳಿಂದಲೂ ಮೂಲ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ.
ಕೊಪ್ಪಳ: "ಸಿದ್ದರಾಮಯ್ಯ ಹಿಟ್ಲರ್ ಇದ್ದ ಹಾಗೆ. ನಾಲ್ಕು ವರ್ಷಗಳಿಂದಲೂ ಮೂಲ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಅವರಲ್ಲಿ ಮೂಲ ಕಾಂಗ್ರೆಸ್ ರಕ್ತ ಇಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ನಾನು ಕಾಂಗ್ರೆಸ್ ತೊರೆಯುತ್ತಿದ್ದೇನೆ" .ಮಾಜಿ ಎಂಎಲ್ ಸಿ ಎಚ್.ಆರ್.ಶ್ರೀನಾಥ್ ಹೇಳಿದ್ದಾರೆ. ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ರವಾನಿಸಿದ ಶ್ರೀನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
"ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದು ಅವರು ಕಾಂಗ್ರೆಸ್ ನ್ನು ಹೈಜಾಕ್ ಮಾಡಿದ್ದಾರೆ. ಇಂದಿರಾಗಾಂಧಿ ಕಾಂಗ್ರೆಸ್ ಹೋಗಿ ಸಿದ್ದರಾಮಯ್ಯ ಕಾಂಗ್ರೆಸ್ ಬಂದಿದೆ" ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ನಾವು ಇಂದಿರಾಗಾಂಧಿ ಕಾಲದಿಂದ ಕಾಂಗ್ರೆಸ್ ನಲ್ಲಿದ್ದೇವೆ. ಆದರೆ ಸಿದ್ದರಾಮಯ್ಯ ಮಾತ್ರ ಇತ್ತೀಚೆಗೆ ಬಂದು ಮೂಲ ಕಾಂಗ್ರೆಸ್ಸಿಗರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಶ್ರೀನಾಥ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಶ್ರೀನಾಥ್ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ