
ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತರ ಕೂಗು ಹೆಚ್ಚಾಗುತ್ತಿದ್ದು, ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಮ್. ಕೃಷ್ಣಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಹುಲ್ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಯುವಕರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದೆ.
ಬಿಜೆಪಿ ನಾಯಕ ಎಸ್ ಪ್ರಕಾಶ್ ಅವರು ಮಾತನಾಡಿ, ತಮ್ಮ ಸೇವೆಯಿಂದಲೇ ಗುರ್ತಿಸಿಕೊಂಡಿದ್ದ ಎಸ್.ಎಂ.ಕೃಷ್ಣಾ ಅವರನ್ನು ರಾಹುಲ್ ಗಾಂಧಿಯವರು ಗುರಿ ಮಾಡಿದ್ದರು. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುದು ಕೃಷ್ಣಾ ಅವರಿಗೆ ತೀವ್ರವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಜನಾರ್ಧನ ಪೂಜಾಗಿ, ಶ್ರೀನಿವಾಸ ಪ್ರಸಾದ್ ಅವರನ್ನೂ ಕಡೆಗಳಿಸಲಾಗಿದೆ. ಶ್ರೀನಿವಾಸ ಪ್ರಸಾದ್ ಅವರೂ ಕೂಡ ರಾಹುಲ್ ಗಾಂಧಿಯವರ ನಾಯಕತ್ವದ ವಿರುದ್ಧ ದನಿಯೆತ್ತಿದ್ದರು.
ಎಸ್.ಎಂ. ಕೃಷ್ಣಾ ಅವರು ಕಾಂಗ್ರೆಸ್ ಕೈ ಬಿಟ್ಟಿರುವುದು ಪಕ್ಷಕ್ಕೆ ನಿಜಕ್ಕೂ ದೊಡ್ಡ ಹಿನ್ನಡೆಯಾಗಿದೆ. ಕಾಂಗ್ರೆಸ್ ನಾಯಕತ್ವಕ್ಕೆ ರಾಹುಲ್ ಗಾಂಧಿ ಅರ್ಹರಲ್ಲ ಎಂದು ಸ್ಪಷ್ಟವಾಗಿ ಕೃಷ್ಣಾ ಅವರು ಹೇಳಿದ್ದರು. ಭವಿಷ್ಯದಲ್ಲಿ ಕಾಂಗ್ರೆಸ ದೊಡ್ಡ ಹೊಡೆದ ಬೀಳುವುದು ಖಚಿತವಾಗಿದ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಗೊಂಡಿರುವ ಕುರಿತಂತೆ ಮಾತನಾಡಿರುವ ಅವರು, ಶೀಘ್ರದಲ್ಲಿಯೇ ಸೈಕಲ್ ಪಂಚರ್ ಆಗಲಿದೆ ಎಂದಿದ್ದಾರೆ.
ಮೈತ್ರಿಗೊಳ್ಳುವುದಕ್ಕೂ ಹಿಂದಿನ ದಿನ ಯಾವದ್ ಅವರ ವಿರುದ್ದ ಕಾಂಗ್ರೆಸ್ ಹರಿಹಾಯ್ದಿತ್ತುಯ ಮುಲಾಂ ಸಿಂಗ್ ಯಾದವ್ ಅವರ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿತ್ತು. ಮೈತ್ರಿಗೊಳ್ಳುತ್ತಿದ್ದಂತೆಯೇ ರಾತ್ರೋರಾತ್ರಿ ಕಥಾ ನಿರೂಪಣೆಯೇ ಬದಲಾಗಿ ಹೋಯಿತು. ಕಂಗಾಲಾಗಿದ್ದ ಎರಡು ಪಕ್ಷಗಳು ಕೈಜೋಡಿಸಿ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿತು ಎಂದು ಹೇಳಿದ್ದಾರೆ.
ಪಂಜಾಬ್ ನಲ್ಲಿ ಶೇ.70 ರಷ್ಟು ಯುವಕರು ಮಾದನ ವ್ಯಸನಕ್ಕೊಳಪಗಾಗಿದ್ದಾರೆಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೀಡುತ್ತಿರುವ ಸ್ವಪ್ರತಿಷ್ಠೆಯ ಹೇಳಿಕೆಗಳು ಪಂಜಾಬ್ ಹಾಗೂ ಅಲ್ಲಿನ ಯುವಕರ ಗೌರವವನ್ನು ಹಾಳು ಮಾಡುತ್ತಿದೆ. ಬಂದಾಲ್ ಕುಟುಂಬಕ್ಕೆ ಅನಾವಶ್ಯಕವಾಗಿ ಕೆಟ್ಟ ಹೆಸರನ್ನು ತರುತ್ತಿದ್ದಾರೆಂದು ತಿಳಿಸಿದ್ದಾರೆ.
Advertisement