ಬಿಜೆಪಿ ದಲಿತ ಕಾರ್ಯಕರ್ತನ ಮನೆಯಲ್ಲಿ ಬಿಎಸ್ ವೈ ಉಪಹಾರ ಸೇವನೆ
ಬಿಜೆಪಿ ದಲಿತ ಕಾರ್ಯಕರ್ತನ ಮನೆಯಲ್ಲಿ ಬಿಎಸ್ ವೈ ಉಪಹಾರ ಸೇವನೆ

ಈ ಬಾರಿ, ಬಿಎಸ್‏ವೈಗೆ ದಲಿತರ ಮನೆಯಲ್ಲೇ ಉಪಹಾರ ತಯಾರಿ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಕಲಬುರಗಿಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದರು, ಆದರೆ ಈ ಬಾರಿ ಅವರಿಗೆ ದಲಿತರ ...
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುರುವಾರ ಕಲಬುರಗಿಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದರು, ಆದರೆ ಈ ಬಾರಿ ಅವರಿಗೆ ದಲಿತರ ಮನೆಯಲ್ಲಿಯೇ ಅಡುಗೆ ತಯಾರಿಸಲಾಗಿತ್ತು.
ಬಿಜೆಪಿ ಕಾರ್ಯಕರ್ತ ಅವಿನಾಶ್ ಗಾಯಕ್ ವಾಡ್ ತಮ್ಮ ಹಿತೈಷಿಗಳೊಂದಿಗೆ ಸೇರಿ ಉಪ್ಪಿಟ್ಟು, ಕೇಸರಿ ಬಾತ್, ಖಾರ ಮಂಡಕ್ಕಿ ಮತ್ತು ಮಿರ್ಚಿ ಭಜ್ಜಿಯನ್ನು ತಯಾರಿಸಿ ಬಂದ ಅತಿಥಿಗಳಿಗೆ ನೀಡಲಾಯಿತು.
ತಮ್ಮ ಕುಟುಂಬ ಸುಮಾರು 500 ಮಂದಿ ಗಾಗುವಷ್ಟು ಉಪಾಹಾರ ತಯಾರಿಸಿತ್ತು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಭಗವಾನ್ ಖೂಬಾ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಬಂಧಿ ಹಾಗೂ ದಲಿತ ಮುಖಂಡ ವಿಥಲ್ ದೊಡ್ಮನಿ ಹಾಜರಿದ್ದರು.
ಇತ್ತೀಚೆಗೆ ಯಡಿಯೂರಪ್ಪ ತುಮಕೂರಿನ ದಲಿತರ ಮನೆಯಲ್ಲಿ ಸೇವಿಸಿದ ಉಪಹಾರ ಸೇವಿಸಿದ್ದರು, ಅದನ್ನು ರೆಸ್ಟೋರೆಂಟ್ ನಿಂದ ತರಿಸಲಾಗಿತ್ತು ಎಂದು ವರದಿಯಾಗಿತ್ತು. 
ಆಹಾರವನ್ನು ಮನೆಯಲ್ಲಿಯೇ ತಯಾರಿಸಬೇಕೋ ಅಥವಾ ಹೊರಗಡೆಯಿಂದ ತರಿಸಬೇಕೋ ಎಂಬ ವಿಚಾರ ಆ ಕುಟುಂಬಕ್ಕೆ ಸಂಬಂಧಿಸಿದ್ದಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 
ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಜನಾಭಿಪ್ರಾಯದ ಮೇಲೆ ನಡೆಯಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಮುಂದಿನ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸಲು ಈಗಾಗಲೇ ರಾಜ್ಯದಲ್ಲಿ ಒಮ್ಮೆ ಸರ್ವೇ ಕಾರ್ಯ ನಡೆಸಲಾಗಿದೆ. ಈಗ ಬರ ವೀಕ್ಷಣೆಯ ಜತೆಗೂ ಅಭ್ಯರ್ಥಿಗಳ ಬಗ್ಗೆ ಜನಾಭಿಪ್ರಾಯ ಕೂಡ ಸಂಗ್ರಹಿಸಲಾಗುತ್ತಿದೆ. ಚುನಾವಣಾ ಮುನ್ನ ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಲಾಗುವುದು. 
ಜನರ ಒಲವು ಇರುವ ವ್ಯಕ್ತಿಗೆ ಟಿಕೆಟ್‌ ನೀಡಲಾಗು ವುದು. ಈ ಕುರಿತು ಆಗಸ್ಟ್‌ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com