ರಿಪಬ್ಲಿಕ್ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ಬಹಿರಂಗ ಕಾದಾಟ

2008 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಒಗ್ಗಟ್ಟಾಗಿ ಹೋರಾಡಿ, ಮಹತ್ವದ ಪಾತ್ರ ವಹಿಸಿದ್ದ ರೆಡ್ಡಿ ಸಹೋದರರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬಳ್ಳಾರಿ: 2008 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಒಗ್ಗಟ್ಟಾಗಿ ಹೋರಾಡಿ, ಮಹತ್ವದ ಪಾತ್ರ ವಹಿಸಿದ್ದ ರೆಡ್ಡಿ ಸಹೋದರರು ಈಗ ಚದುರಿದ ಮೋಡದಂತಾಗಿದ್ದಾರೆ.
ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮತ್ತಮು ಸೋಮ ಶೇಖರ ರೆಡ್ಡಿ ನಡುವೆ ಮನಸ್ತಾಪ ಮೂಡಿದ್ದು, ಇವರ ಒಡಕಿಗೆ ಹಲವು ಕಾರಣಗಳಿವೆ ಎನ್ನಲಾಗುತ್ತಿದೆ.
ಚಿಟ್ ಫಂಡ್ ವ್ಯವಹಾರ ಆರಂಭಿಸಿದ ರೆಡ್ಡಿ ಸಹೋದರರು, ನಂತರ ಗಣಿಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1999 ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸೋನಿಯಾಗಾಂಧಿ ಮತ್ತು ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ದಿಸಿದ್ದ ವೇಳೆ ಬೆಳಕಿಗೆ ಬಂದವರು ರೆಡ್ಡಿ ಸಹೋದರರು. ಈ ಮೂವರು ಸಹೋದರರು ತಮ್ಮ ಹಣ ಬಲ ತೋಳ್ಬಲ ಪ್ರದರ್ಶಿಸಿದರೂ ಸುಷ್ಮಾ ಅವರನ್ನು ಗೆಲ್ಲಿಸಲಾಗಲಿಲ್ಲ, ಆದರೆ ಪಕ್ಷದ ವರಿಷ್ಠರು ತಮ್ಮ ಬಗ್ಗೆ ಗಮನ ಹರಿಸುವಂತೆ ಮಾಡುವಲ್ಲಿ  ಯಶಸ್ವಿಯಾದರು. 
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಜೈಲಿಗೆ ಹೋದ ನಂತರ ರೆಡ್ಡಿ ಸಹೋದರರ ಸಂಬಂದದಲ್ಲಿ ಬಿರುಕು ಮೂಡಿತು. ಜೈಲಿನಲ್ಲಿದ್ದ ಜನಾರ್ದನೆ ರೆಡ್ಜಿಯನ್ನು ಕೇವಲ ಒಂದೇ ಒಂದು ಬಾರಿ ಭೇಟಿ ಮಾಡಿದ ಕರುಣಾಕರ ರೆಡ್ಡಿ ತಮ್ಮ ಕಿರಿಯ ಸೋಹದರನನ್ನು ಜೈಲಿನಿಂದ ಹೊರ ತರಲು ಜಾಮೀನಿಗಾಗಿ ಪ್ರಯತ್ನ ಪಡಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಚಿಂತೆಗೀಡುಮಾಡಿತ್ತು.
ಶ್ರೀರಾಮುಲು ರಾಜಕೀಯವಾಗಿ ಮುಂದೆ ಬರಲು ಜನಾರ್ದನ ರೆಡ್ಡಿ ಮಾಡಿದ ಸಹಾಯ ಕರುಣಾರಕರ ರೆಡ್ಡಿಯ ಕಣ್ಣು ಕೆಂಪಾಗಿಸಿತ್ತು. 
2013ರ ವಿಧಾನ ಸಭೆ ಚುನಾವಣೆಯಲ್ಲಿ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ವಿರುದ್ಧ ಶ್ರೀರಾಮುಮಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ ನಂತರ ರೆಡ್ಡಿ ಸಹೋಕರರ ನಡುವಿನ ಮನಸ್ತಾಪ ಹೆಚ್ಚಾಯಿತು. ಕರುಣಾಕರ ರೆಡ್ಡಿ ಶ್ರೀರಾಮುಲು ವಿರುದ್ಧ 10 ಸಿವಿಲ್ ಕೇಸುಗಳನ್ನು ದಾಖಲಿಸಿದರು. 
ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ  ಬಳ್ಳಾರಿಯಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ, ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com