ಸಿದ್ದರಾಮಯ್ಯ ಮತ್ತು ಎಸ್ ಎಂ ಕೃಷ್ಣ
ಸಿದ್ದರಾಮಯ್ಯ ಮತ್ತು ಎಸ್ ಎಂ ಕೃಷ್ಣ

ಎಸ್ ಎಂಕೆ ಆಪ್ತ ಶಿವಲಿಂಗಯ್ಯರನ್ನು ಕಾಡಾ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಸಿಎಂ

ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆಪ್ತ ಶಿವಲಿಂಗಯ್ಯ ಅವರನ್ನು ಕಾಡಾ ಅಧ್ಯಕ್ಷ ಸ್ಥಾನದಿಂದ ಸಿಎಂ ಸಿದ್ದರಾಮಯ್ಯ ...
Published on

ಮೈಸೂರು: ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆಪ್ತ ಶಿವಲಿಂಗಯ್ಯ ಅವರನ್ನು ಕಾಡಾ ಅಧ್ಯಕ್ಷ ಸ್ಥಾನದಿಂದ ಸಿಎಂ ಸಿದ್ದರಾಮಯ್ಯ ವಜಾಗೊಳಿಸಿದ್ದಾರೆ.

CADA ದ ಅಧ್ಯಕ್ಷರನ್ನಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ಕಾಂಗ್ರೆಸ್ ಮುಖಂಡ ನಂಜಪ್ಪ ಅವರನ್ನು ನೇಮಕ ಮಾಡಿದೆ. 2013 ರಲ್ಲಿ ಕಾಂಗ್ರೆಸ್ ಸೇರ್ಪಡೆಗೂ ಮುನ್ನ ನಂಜಪ್ಪ ಎರಡು ವಿಧಾನ ಸಭೆ ಚುನಾವಣೆಯಲ್ಲಿ ಎಚ್ ಎಸ್ ಮಹಾದೇವ ಪ್ರಸಾದ್ ವಿರುದ್ಧ ಸ್ಪರ್ದಿಸಿದ್ದರು.

ಪ್ರಮುಖ ವೀರಶೈವ ಮುಖಂಡರಾಗಿರುವ ನಂಜಪ್ಪ ಅವರನ್ನು ಜೆಡಿಎಸ್ ಮತ್ತು ಬಿಜೆಪಿ ತಮ್ಮೆಡೆದೆ ಸೆಳೆಯಬಹುದೆಂಬ ಭಯದಿಂದಾಗಿ ಕಾಂಗ್ರೆಸ್ ನಂಜಪ್ಪ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿದೆ, ಇದು  ಉಪ ಚುನಾವಣೆಯಲ್ಲಿ ಗೀತಾ ಮಹದೇವ್ ಪ್ರಸಾದ್ ಅವರ ಗೆಲುವಿಗೆ ಕಾರಣವಾಗಲಿದೆ ಎಂಬ ಲೆಕ್ಕಾಚಾರದೊಂದಿಗೆ ಅವರನ್ನು ' ಕಾಡಾ' ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಯ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಗೀತಾ ಮಹಾದೇವ ಪ್ರಸಾದ್  ಈಗಾಗಲೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಜನರನ್ನು ಭೇಟಿ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com