ಎಸ್.ಎಂ. ಕೃಷ್ಣ ಅಲ್ಲ, ಕಾಂಗ್ರೆಸ್ ಭವಿಷ್ಯವನ್ನು ಜನರು ನಿರ್ಧರಿಸುತ್ತಾರೆ: ಜಿ. ಪರಮೇಶ್ವರ್

ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತದೆಯೋ ಇಲ್ಲವೋ ಎಂಬುದನ್ನು ಜನತೆ ನಿರ್ಧರಿಸುತ್ತಾರೆ, ಎಸ್.ಎಂ. ಕೃಷ್ಣ ಅಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ...
ಗೃಹ ಸಚಿವ ಜಿ. ಪರಮೇಶ್ವರ್
ಗೃಹ ಸಚಿವ ಜಿ. ಪರಮೇಶ್ವರ್
ಬೆಂಗಳೂರು: ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತದೆಯೋ ಇಲ್ಲವೋ ಎಂಬುದನ್ನು ಜನತೆ ನಿರ್ಧರಿಸುತ್ತಾರೆ, ಎಸ್.ಎಂ. ಕೃಷ್ಣ ಅಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ. 
ಎಸ್.ಎಂ.ಕೃಷ್ಣ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಆ ಪಕ್ಷದ ಪರವಾಗಿಯೇ ಮಾತನಾಡುವುದು ಸಾಮಾನ್ಯ. ಅವರ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಸಲುವಾಗಿ ಹೇಳಿಕೆಯನ್ನು ನೀಡುತ್ತಾರೆ. ಅವರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ರಾಜ್ಯದ ಜನತೆ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದ್ದಾರೆ. 
2018ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಏಕೆಂದರೆ, ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಎಲ್ಲಾ ಯೋಜನೆಗಳು ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ತಿಳಿಸಿದ್ದಾರೆ. 
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ್ದ ಎಸ್.ಎಂ. ಕೃಷ್ಣ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದರು.
46 ವರ್ಷಗಳ ಕಾಲ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೆ. ಪಕ್ಷವನ್ನು ಯಾವ ಕಾರಣಕ್ಕೆ ತೊರೆದೆ ಎಂಬುದನ್ನು ಪ್ರತೀಯೊಬ್ಬರಿಗೂ ಸ್ಪಷ್ಟ ಪಡಿಸಿದ್ದೇನೆ. ಸಾಕಷ್ಟು ಹಿಂಸೆಯ ಬಳಿ ನಾನು ಪಕ್ಷದಿಂದಲೇ ಹೊರ ಬಂದೆ. ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನದಿಂದ ತೆಗೆಯುವುದಕ್ಕೂ ಮುನ್ನ ನನ್ನನ್ನು ಒಂದು ಮಾತನ್ನೂ ಕೇಳಿಲಿಲ್ಲ. ಹೀಗಾಗಿ ನಾನು ರಾಜೀನಾಮೆಯನ್ನು ಸಲ್ಲಿಸಿದ್ದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com