ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಮೋದಿ ಕಣ್ಣು: ಜನರನ್ನು ತಲುಪಲು ರಾಜ್ಯ ಸಂಸದರಿಗೆ ಸೂಚನೆ

ಉತ್ತರ ಭಾರತದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಜಯ ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಕಡೆ ತಮ್ಮ ದೃಷ್ಟಿ..
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಬೆಂಗಳೂರು: ಉತ್ತರ ಭಾರತದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಜಯ ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಕಡೆ ತಮ್ಮ ದೃಷ್ಟಿ ಹರಿಸಿದ್ದಾರೆ.

2019ರ ಲೋಕಸಭೆ ಹಾಗೂ 2018ರ ಕರ್ನಾಟಕ ವಿಧಾನ ಸಭೆ ಚುನಾವಣೆಗಳಲ್ಲಿ ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಮೈದಾನಕ್ಕೆ ಇಳಿಯಿರಿ, ಜನರನ್ನು ತಲುಪಿರಿ, ಕೇಂದ್ರ ಸರ್ಕಾರದ ಪ್ರಸಿದ್ಧ ಯೋಜನೆಗಳಾದ ಜನ್ ಧನ್, ಭೇಟಿ ಬಚಾವೋ, ಭೇಟಿ ಪಡಾವೋ ಮತ್ತು ಮುದ್ರಾ ಬ್ಯಾಂಕ್ ಗಳಂತಹ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ರಾಜ್ಯ ಸಂಸದರಿಗೆ ಮೋದಿ ಸಲಹೆ ನೀಡಿದ್ದಾರೆ.

ನಿನ್ನೆ ಪ್ರಧಾನಿ ಮೋದಿ ಅವರ ಜೊತೆ ನಡೆದ ರಾಜ್ಯ ಸಂಸದರಿಗೆ ಬೆಳಗಿನ ಉಪಹಾರ ಕೂಟದಲ್ಲಿ ಈ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದಕ್ಷಿಣ ರಾಜ್ಯಗಳ ಎಲ್ಲಾ ಬಿಜೆಪಿ ಸಂಸದರ ಜೊತೆ ಸಭೆ ನಡೆಸಲು ತೀರ್ಮಾನಿಸಿದ್ದರು, ಆದರೆ ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ಇರುವುದರಿಂದ ರಾಜ್ಯದ ಸಂಸದರೆಡೆಗೆ ವಿಶೇಷ ಗಮನ ಹರಿಸಿದ್ದಾರೆ.

ಜನರನ್ನು ತಲುಪಿ, ಅವರಿಗೆ ಹತ್ತಿರವಾಗಿ, ಸರ್ಕಾರದ ಜನಕಲ್ಯಾಣ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೆಲಸಗಳ ಬಗ್ಗೆ ಅರಿವು ಮೂಡಿಸಿ ಎಂದು ಮೋದಿ ಹೇಳಿದ್ದಾರೆಂದು ರಾಜ್ಯ ಬಿಜೆಪಿ ಸಂಸದರೊಬ್ಬರು ತಿಳಿಸಿದ್ದಾರೆ.

ಕರ್ನಾಟಕ, ಗೋವಾ, ಮತ್ತು ಮಹಾರಾಷ್ಟ್ರ ನಡುವಿನ ಮಹಾದಾಯಿ ವಿವಾದ ಬಗೆಹರಿಸುವಂತೆ ಪ್ರದಾನಿ ಅವರ ಬಳಿ ಚರ್ಚಿಸಲು ಸಾಧ್ಯವಾಗಲೇ ಇಲ್ಲ, ಜೊತೆಗೆ ಕರ್ನಾಟಕಕ್ಕೆ ಹೆಚ್ಚಿನ ಬರಪರಿಹಾರ ಅನುದಾನ ಘೋಷಿಸುವ ಸಂಬಂಧವೂ ಚರ್ಚೆ ನಡೆಯಲಿಲ್ಲ. ಪ್ರಮುಖವಾಗಿ ಪಕ್ಷದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಸಂಸದರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com