ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ನಿಂದಾಗಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆಎಸ್ ಈಶ್ವರಪ್ಪ ಹಾಗೂ ಬಿಎಸ್ ಯಡಿಯೂರಪ್ಪ ನಡುವೆ ಶೀತಲ ಸಮರ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ನ ಮಧ್ಯಪ್ರವೇಶದಿಂದಾಗಿ ಇಬ್ಬರ ನಡುವಿನ ಮುನಿಸು ತಣ್ಣಗಾಗಿತ್ತು. ಅಲ್ಲದೇ ಬ್ರಿಗೇಡ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಈಶ್ವರಪ್ಪಗೆ ತಾಕೀತು ಮಾಡಿತ್ತು. ಇದೀಗ ಯಡಿಯೂರಪ್ಪನವರೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮತ್ತೊಮ್ಮೆ ಘೋಷಣೆ ಮಾಡಿರುವುದರಿಂದ ಈಶ್ವರಪ್ಪ ಮತ್ತು ವಿರೋಧಿ ಪಾಳಯಕ್ಕೆ ಭಾರೀ ಮುಖಭಂಗವಾದಂತಾಗಿದೆ.