ವೈಮನಸ್ಯವಿಲ್ಲ ಆದರೂ, ಸಿಎಂ ಸಿದ್ದರಾಮಯ್ಯ ಜನಾಶೀರ್ವಾದ ಯಾತ್ರೆಗೆ ಹೋಗಲ್ಲ; ಪರಮೇಶ್ವರ್

ಮುಖ್ಯಮಂತ್ರಿ ಸಿದ್ದರಾಮತ್ತ ಹಾಗೂ ನನ್ನ ನಡುವೆ ಯಾವುದೇ ರೀತಿಯ ವೈಮನಸ್ಯವಿಲ್ಲ. ಆದರೂ, ಸರ್ಕಾರದ ವತಿಯಿಂದ ನಡೆಸಲಾಗುವ ಜನ ಆಶೀರ್ವಾದ ಯಾತ್ರೆಗೆ ಹೋಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್...
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮತ್ತ ಹಾಗೂ ನನ್ನ ನಡುವೆ ಯಾವುದೇ ರೀತಿಯ ವೈಮನಸ್ಯವಿಲ್ಲ. ಆದರೂ, ಸರ್ಕಾರದ ವತಿಯಿಂದ ನಡೆಸಲಾಗುವ ಜನ ಆಶೀರ್ವಾದ ಯಾತ್ರೆಗೆ ಹೋಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದ್ದಾರೆ. 
ಶುಕ್ರವಾರ ನಗರದ ಕೆಪಿಪಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಡಿಸೆಂಬರ್ ತಿಂಗಳಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ಆಶೀರ್ವಾದ ಯಾತ್ರೆ ನಡೆಸಲಿದ್ದಾರೆ. ಕಾರ್ಯಕ್ರಮದ ಸರ್ಕಾರದ ವತಿಯಿಂದ ನಡೆದರೆ ಪಕ್ಷದ ಅಧ್ಯಕ್ಷನಾಗಿ ನಾನು ಭಾಗವಹಿಸುವುದಿಲ್ಲ. ಪಕ್ಷದ ವತಿಯಿಂದ ನಡೆದರೆ ರಾಜ್ಯಾದ್ಯಂತ ಎಲ್ಲಾ ಕಡೆಯೂ ಭಾಗವಹಿಸುತ್ತೇನೆಂದು ಹೇಳಿದ್ದಾರೆ. 
ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಡಿಸೆಂಬರ್ ತಿಂಗಳಿನಲ್ಲಿ ನಡೆಸಲಿರುವ ಜನ ಆಶೀರ್ವಾದ ಯಾತ್ರೆಯನ್ನು ಸರ್ಕಾರದ ವತಿಯಿಂದ ಮಾಡಬೇಕೆ ಅಥವಾ ಪಕ್ಷದ ವತಿಯಿಂದ ಮಾಡಬೇಕೆ ಎಂಬುದನ್ನು ಒಂದು ವಾರದಲ್ಲಿ ನಿರ್ಧಾರ ಮಾಡಲಾಗುತ್ತದೆ. ಸರ್ಕಾರದ ವತಿಯಿಂದ ನಡೆಸುವುದಾದರೆ, ಯಾತ್ರೆಯಲ್ಲಿ ನಾನು ಭಾಗವಹಿಸುವುದಿಲ್ಲ. ಪಕ್ಷದ ವತಿಯಿಂದ ಆದರೆ, ಭಾಗವಹಿಸುತ್ತೇನೆ. ಯಾವುದೇ ಆದರೂ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವುದು ಯಾತ್ರೆಯ ಉದ್ದೇಶವಾಗಿದ್ದು, ಹೇಗೆ ಮಾಡಬೇಕೆಂಬುದನ್ನು 1 ವಾರದಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 
ನಾವು ಯಾವುದೇ ಯಾತ್ರೆಗಳ ಕುರಿತಂತೆ ಮಾತುಕತೆ ನಡೆಸಿಲ್ಲ. ನಮ್ಮ ತಂತ್ರಗಳು ವಿಭಿನ್ನವಾಗಿದ್ದು, ಸರ್ಕಾರಿ ಕಾರ್ಯಕ್ರಮಗಳ ಕುರಿತಂತೆ ಎಲ್ಲಾ ಜಿಲ್ಲೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ನೀಡಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗುವುದಿಲ್ಲ. ತುಮಕೂರು ಕ್ಷೇತ್ರದ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳು ತುಮಕೂರಿಗೆ ಬಂದಾಗ ಮಾತ್ರ ಭಾಗವಹಿಸುತ್ತೇನೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com