ರಾಜ್ಯದ ಚೆಕ್'ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಸಿದ್ದು ಸರ್ಕಾರ: ಹೆಚ್.ಡಿ ಕುಮಾರಸ್ವಾಮಿ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರ ಚೆಕ್ ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಶನಿವಾರ...
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಜಾರಿಗೆ ತಂದ ಬಳಿಕ ರಾಜ್ಯ ಸರ್ಕಾರ ಚೆಕ್ ಪೋಸ್ಟ್ ಗಳಲ್ಲಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡುತ್ತಿದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಶನಿವಾರ ಆರೋಪಿಸಿದ್ದಾರೆ. 
ಈ ಕುರಿತಂತೆ ಪಕ್ಷದ ಕಚೇರಿಯಲ್ಲಿಯಲ್ಲಿ ಮಾತನಾಡಿರುವ ಅವರು, ಚೆಕ್ ಪೋಸ್ಟ್ ಗಳಲ್ಲಿ ಓರ್ವ ಇನ್ಸ್ ಪೆಕ್ಟರ್ ಮತ್ತು ರೌಡಿಗಳನ್ನು ಬಿಡುತ್ತಿರುವ ಸಿದ್ದರಾಮಯ್ಯ ಸರ್ಕಾರ ತಿಂಗಳಿಗೆ ರೂ.200 ಕೋಟಿ ವಸೂಲಿ ಮಾಡುತ್ತಿದೆ. ಈ ವಸೂಲಿ ದಂಧೆ 15 ದಿನದಲ್ಲಿ ನಿಲ್ಲಿಸಬೇಕು. ಇಲ್ಲದೇ ಹೋದರೆ, ಚೆಕ್ ಪೋಸ್ಟ್ ಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 
ಕೆಲವು ರಾಜ್ಯಗಳು ಜಿಎಸ್ ಟಿ ಜಾರಿಯಾದ ಬಳಿಕ ಸಾರಿಕೆ ಇಲಾಖೆ ಚೆಕ್ ಪೋಸ್ಟ್ ಗಳನ್ನು ರದ್ದುಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಚೆಕ್ ಪೋಸ್ಟ್ ಗಳನ್ನು ರದ್ದುಗೊಳಿಸದೆ ಜನರಿಂದ ಹಣ ವಸೂಲಿಗೆ ನಿಂತಿದೆ. ಪ್ರತಿನಿತ್ಯ ರೂ.30-40 ಲಕ್ಷದಂತೆ ತಿಂಗಳಿಗೆ ರೂ.200 ಕೋಟಿ ವಸೂಲಿ ಮಾಡುತ್ತಿದೆ. ಮುಂದಿನ ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ದರೋಡೆಗೆ ರಾಜ್ಯ ಸರ್ಕಾರವು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ. 
ಸಿದ್ದರಾಮಯ್ಯ ಅವರು ತಾವೊಬ್ಬ ಪ್ರಾಮಾಣಿಕ ವ್ಯಕ್ತಿಯೆಂದು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಚೆಕ್ ಪೋಸ್ಟ್ ಗಳಲ್ಲಿ ನಡೆಸಲಾಗುತ್ತಿರುವ ದಂಧೆ ಕುರಿತಂತೆ ತಮಗೇನು ಗೊತ್ತಿಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಗೃಹ ಸಚವರು ಹಾಗೂ ಸಾರಿಗೆ ಸಚಿವರೂ ಕೂಡ ಇದೇ ರೀತಿ ಇದ್ದಾರೆ. ರೌಡಿಗಳ ಮೂಲಕ ಸರ್ಕಾರವನ್ನು ನಡೆಸಲು ಸಿದ್ದರಾಮಯ್ಯ ಅವರು ತೀರ್ಮಾನಿಸಿದಂತಿದೆ. ಚೆಕ್ ಪೋಸ್ಟ್ ಗಳಲ್ಲಿ ನಡೆಸಲಾಗುತ್ತಿರುವ ವಸೂಲಿ ಕುರಿತಂತೆ ಅವರು ಸುಮ್ಮನೆ ಕೂರಬಹುದು. ಆದರೆ, ನಾವಲ್ಲ. ಕೆಲ ದಿನಗಳ ಹಿಂದಷ್ಟೇ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡಿಸಲಾಗಿದೆ ಎಂದು ಸಾರಿಗೆ ಸಚಿವರು ಹೇಳಿದ್ದರು. ಆದರೆ, ಚೆಕ್ ಪೋಸ್ಟ್ ಗಳಲ್ಲಿ ಈಗಲೂ ರೌಟಿಗಳು ಅಂತರ್ ರಾಜ್ಯದ ವಾಹನಗಳನ್ನು ತಡೆಗು ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಂಗಿ ಸಮಾಜವಾದಿಯಾಗಿದ್ದು, ಸಮಾಜವಾದ ಹಿನ್ನಲೆಯಿಂದ ಬಂದರೂ ಸುಮಾರು ರೂ.60 ಸಾವಿನ ಮೌಲ್ಯದ ಶೂಗಳನ್ನು ಹಾಕಿಕೊಳ್ಳುತ್ತಾರೆ. ಈ ಹಿಂದೆ ದುಬಾರಿ ವಾಚ್ ಧರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಡ ಮುಖ್ಯಮಂತ್ರಿಗಳು ದುಬಾರಿ ಶೂ ಥರಿಸುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸಮಾಜವಾದ ಜೀವನ ಅಳವಡಿಸಿಕೊಂಡಿರುವ ಕುರಿತು ಸಿದ್ದರಾಮಯ್ಯ ಅವರು ಮಾತನಾಡುತ್ತಾರೆ. ಆದರೆ, ಬಂಡವಾಳಶಾಯಿ ಧೋರಣೆಯ ಐಶಾರಾಮಿ ಜೀವನ ನಡೆಸುತ್ತಾರೆಂದು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com