ಕೆಪಿಎಂಇ ತಿದ್ದುಪಡಿ ವಿಧೇಯಕ ಜನ ವಿರೋಧಿ ಎಂದು ತೀರ್ಮಾನವಾದರೆ, ನಿವೃತ್ತಿ ಪಡೆಯುವೆ: ರಮೇಶ್ ಕುಮಾರ್

ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕದ ಸಾರ್ವಜನಿಕ ವಿರೋಧಿ ಎಂಬುದು ಸಾಬೀತಾದರೆ, ಆ ಕ್ಷಣವೇ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಂಗಳವಾರ...
ಆರೋಗ್ಯ ಸಚಿವ ರಮೇಶ್ ಕುಮಾರ್
ಆರೋಗ್ಯ ಸಚಿವ ರಮೇಶ್ ಕುಮಾರ್
ಬೆಂಗಳೂರು: ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕದ ಸಾರ್ವಜನಿಕ ವಿರೋಧಿ ಎಂಬುದು ಸಾಬೀತಾದರೆ, ಆ ಕ್ಷಣವೇ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. 
ಮಂಗಳವಾರ ಶೂನ್ಯ ವೇಳೆಯಲ್ಲಿ ಖಾಸಗಿ ವೈದ್ಯಕೀಯ ತಿದ್ದುಪಡಿ ವಿದೇಯಕ ಕುರಿತು ಪ್ರಸ್ತಾಪಿಸಿದ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ಖಾಸಗಿ ವೈದ್ಯಕೀಯ ತಿದ್ದುಪಡಿ ವಿದೇಯಕವು ಜನ ವಿರೋಧಿ ಎಂದು ಆರೋಪಿಸಲಾಗುತ್ತಿದೆ. ಸೈದ್ಧಾಂತಿಕವಾಗಿ ಆರ್'ಎಸ್ಎಸ್ ನಿಲುವನ್ನು ವಿರೋಧಿಸುತ್ತೇನೆ. ಆದರೂ, ಆರ್'ಎಸ್ಎಸ್ ಸಭೆಗೆ ಕರೆಯಿರಿ. ಅಲ್ಲಿಯೇ ಇಬ್ಬರೂ ಸಾಧಕರ ಹಾಗೂ ಬಾಧಕಗಳು ಕುರಿತು ಚರ್ಚೆ ನಡೆಸೋಣ. ಸಬೆಯಲ್ಲಿ ತಿದ್ದುಪಡಿ ವಿಧೇಯಕ ಜನವಿರೋಧಿ ಎಂದು ತೀರ್ಮಾನವಾದರೆ, ನಿವೃತ್ತಿ ಪಡೆದುಕೊಳ್ಳುತ್ತೇನೆಂದು ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಸವಾಲು ಹಾಕಿದ್ದಾರೆ. 
ಇದೇ ವೇಳೆ ತಮ್ಮನ್ನು ಕೊಲೆಗಡುಕ ಎಂದು ಆರೋಪಿಸಿದ್ದ ಈಶ್ವರಪ್ಪ ವಿರುದ್ಧ ಗುಡುಗಿರುವ ಅವರು, ನಾನು ಕೊಲೆಗಡುಕ ಎಂಬುದಕ್ಕೆ ಸಾಕ್ಷಿಗಳಿದ್ದರೆ ತೋರಿಸಲಿ. ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬುದನ್ನೂ ಹೇಳಬೇಕು ಎಂದು ತಿಳಿಸಿದ್ದಾರೆ. 
ಕೊಲೆಗಡುಕ ಎಂಬ ಪದ ಕೇಳಿ ತಮ್ಮ ಕುಟುಂಬಸ್ಥರು ಕರೆ ಮಾಡಿ ವಿಚಾರಿಸಿದರು. ನನಗೆ ಮಕ್ಕಳಿಲ್ಲ ಎಂದು ಸಹ ಹೇಳಿದ್ದಾರೆ. ಆದರೆ, ನನಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಸುಶಿಕ್ಷಿತರಾಗಿದ್ದಾರೆ. ರಾಜಕೀ ಜೀವನದಲ್ಲಿರುವುದರಿಂದ ನಮಗೆ ಮಾನ ಇಲ್ಲದಿರಬಹುದು. ಆದರೆ, ಮಕ್ಕಳು ಮರ್ಯಾದೆಯಿಂದ ಜೀವನವನ್ನು ನಡೆಸುತ್ತಿದ್ದಾರೆಂದು ಟಾಂಗ್ ಕೊಟ್ಟಿದ್ದಾರೆ. 
ಬಳಿಕ ವೈದ್ಯರ ಪ್ರತಿಭಟನೆಯಿಂದಾಗಿ ರಾಜ್ಯದಲ್ಲಿ ಈ ವರೆಗೂ 6 ಮಂದಿ ಬಲಿಯಾಗಿರುವ ಹಿನ್ನಲೆಯಲ್ಲಿ ವಿಷಾದ ವ್ಯಕ್ತಪಡಿಸಿರುವ ಅವರು, ಮೃತ ಕುಟುಂಬದವರಲ್ಲಿ ಕ್ಷಮೆಯಾಚನೆ ಮಾಡುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com