ನಿನ್ನೆ ಬೆಳಗಾವಿಯ ವಿಧಾನ ಸಭೆ ಕಲಾಪದಲ್ಲಿ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಪರಿಷ್ಕೃತ ಮಸೂದೆಯನ್ನು ಮಂಡಿಸಿದರು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆಯನ್ನು ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮತ್ತು ಮಾಲಿಕರಿಗೆ 6 ತಿಂಗಳಿನಿಂದ 5 ವರ್ಷದವರೆಗೆ ಶಿಕ್ಷೆ ನೀಡಬಹುದಾಗಿತ್ತು. ಆದರೆ ಪರಿಷ್ಕೃತ ಮಸೂದೆಯಲ್ಲಿ 25,000ದಿಂದ 1 ಲಕ್ಷದವರೆಗೆ ದಂಡ ಮಾತ್ರ ವಿಧಿಸಲಾಗುತ್ತದೆ.