ಅಚ್ಛೇದಿನ್ ಎಂದಿಗೂ ಬರುವುದಿಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ

ಅಚ್ಛೇದಿನ್ ಎಂದಿಗೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸೋಮವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಗದಗ: ಅಚ್ಛೇದಿನ್ ಎಂದಿಗೂ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸೋಮವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಗದಗ ಜಿಲ್ಲೆಯಲ್ಲಿ ಭೂಮಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
5,110 ಕೃಷಿ ಹೊಂಡಾ, ಇಂದಿರಾ ಕ್ಯಾಂಟಿನ್, ಕೃಷಿ ಡಿಪ್ಲೊಮಾ ಸಂಸ್ಥೆ ಮತ್ತು 20 ಮೆಗಾವ್ಯಾಟ್ ಸೋಲಾರಾ ಪಾರ್ಕ್', ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಇಂದೋರ್ ಸ್ಟೇಡಿಯಂ ಮತ್ತು 24*7 ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ರೋಣ ತಾಲೂಕನ್ನು ಬಹಿರ್ದೆಸೆಯಿಂದ ಮುಕ್ತ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. 
ನರಗುಂದಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಹೇಳದೆಯೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾದಾಯಿ ನೀರು ವಿವಾದ ಬಗೆಹರಿದಿಲ್ಲ. ಹಾಗೂ ಕಳಸಾ-ಬಂಡೂರಿ ಯೋಜನೆ ಅನುಷ್ಟಾನಗೊಳ್ಳುತ್ತಿಲ್ಲ. ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಡಿ.15ರೊಳಗೆ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದೇ ಆದರೆ, ಆವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. 
ರಾಜ್ಯಕ್ಕೆ ಬಿಜೆಪಿಯವರು ನೀಡಿರುವ ಕೊಡುಗೆಗಳೇನು? ಜನರಿಗೆ ಸೈಕಲ್ ಹಾಗೂ ಸೀರೆಗಳನ್ನು ಮಾತ್ರ ನೀಡಿದ್ದಾರೆ. ನಾವು ಜನತೆಗೆ ಸಾಕಷ್ಟು ಭಾಗ್ಯಗಳನ್ನು ನೀಡಿದ್ದೇನೆ. ಪ್ರಧಾನಿ ಮೋದಿಯವರು ಯಾವಾಗಲೂ ಅಚ್ಛೇದಿನ್ ಬರುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ, ಯಾವಾಗ ಬರುತ್ತದೆ ಆ ಅಚ್ಛೇದಿನ್? ಅಚ್ಛೇದಿನ್ ಯಾವಾಗಲೂ ಬರುವುದಿಲ್ಲ. ಚುನಾವಣೆ ಪ್ರಚಾರದ ವೇಳೆ ನೀಡಲಾಗಿದ್ದ ಸಾಕಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಇಂದಿಗೂ ಮಹಾದಾಯಿ ವಿವಾದವನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ನ್ಯಾಯಾಧೀಕರಣದ ಮೂಲಕ ನಾವು ವಿವಾದವನ್ನು ಬಗೆಹರಿಸಬಹುದು. ಈಗಾಗಲೇ ಈ ಸಂಬಂಧ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ನಾನು ಪತ್ರ ಬರೆದಿದ್ದೇನೆ. ಪ್ರಧಾನಮಂತ್ರಿಗಳಿಗೂ ಪತ್ರ ಬರೆದಿದ್ದೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com