ಯಡಿಯೂರಪ್ಪ ಅವರು ರೂ.2.50 ದರಕ್ಕೆ ಪ್ರತಿ ಯುನಿಟ್ ವಿದ್ಯುತ್ ಕೊಡಿಸಲು ಸಿದ್ದವಾದರೆ, ರಾಜ್ಯ ಸರ್ಕಾರ ವಿದ್ಯುತ್ ಖರೀದಿಗೆ ಈ ವರೆಗೂ ಮಾಡಿಕೊಂಡಿಲುವ ಎಲ್ಲಾ ಒಪ್ಪಂದಗಳನ್ನು ರದ್ದುಗೊಳಿಸಿ, ಕೇವಲ ಕೇಂದ್ರದಿಂದ ವಿದ್ಯುತ್ ಖರೀದಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ಬರೆಯುತ್ತೇನೆ. ತಮ್ಮ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸುವಂತೆ ಹಾಗೂ ಸಭೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ. ಇಷ್ಟೊಂದು ಕಡಿಮೆ ದರದಲ್ಲಿ ವಿದ್ಯುತ್ ದೊರೆಯುವುದಾದರೆ ನಮಗೆ ಬಹಳ ಸಂತೋಷವಾಗುತ್ತದೆ.
ಯಡಿಯೂರಪ್ಪ ಅವರು ರಾಜಕೀಯ ಪ್ರೇರಿತವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಒಂದು ವೇಳೆ ಯುನಿಟ್ ಗೆ ರೂ.2.50ಕ್ಕೆ ವಿದ್ಯುತ್ ದೊರೆಯುವುದಾದರೆ ಖರೀದಿ ಮಾಡಲು ನಾವು ಸಿದ್ಧವಿದ್ದೇವೆಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಕೇಂದ್ರದಿಂದ ರೂ.5.08ರಂತೆ 900 ಮೆಗಾ ವ್ಯಾಟ್ ವಿದ್ಯುತ್ ನ್ನು ಖರೀದಿ ಮಾಡಿತ್ತು. ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಸಾಕಷ್ಟು ಶ್ರಮ ಪಡುತ್ತಿದೆ ಎಂದು ತಿಳಿಸಿದ್ದಾರೆ.