ಉ: ಮೋದಿ ಸರ್ಕಾರದ ಸಾಧನೆಗಳು ನಮ್ಮ ಚುನಾವಣಾ ಪ್ರಚಾರದ ಒಂದು ಭಾಗ, ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದರ ಬಗ್ಗೆ ನಾವು ಸರಿಯಾದ ಅಂಕಿ ಅಂಶ ನೀಡುತ್ತೇವೆ, ಎನ್ ಡಿಎ ಸರ್ಕಾರ ವಿಪತ್ತು ಪರಿಹಾರಕ್ಕಾಗಿ 1,145 ಕೋಟಿ ರು ಹಣ ಬಿಡುಗಡೆ ಮಾಡಿದೆ. ಆದರೆ ಯುಪಿಎ ಸರ್ಕಾರ ಕೇವಲ 6.67 ಕೋಟಿ ರು ಹಣ ಬಿಡುಗಡೆ ಮಾಡಿತ್ತು, ಮೋದಿ ಆಡಳಿತದ 5 ವರ್ಷ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 2.19 ಲಕ್ಷ ಕೋಟಿ ಅನುದಾನ ನೀಡಿದೆ, ಈ ಹಿಂದೆ ಇದ್ದ ಯುಪಿಎ ಸರ್ಕಾರ 88, 583ಕೋಟಿ ಮಾತ್ರ ನೀಡಿದೆ. ಅದರ ಹೊರತಾಗಿ ರಾಜ್ಯದಲ್ಲಿ ಈ ಹಿಂಗೆ ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸಲಿದ್ದೇವೆ, ನಾವು ಹಿಂದುಳಿ ವರ್ಗಗಳಿಗಾಗಿ ನಾವು ದೊಡ್ಡ ಮಟ್ಟದ ರ್ಯಾಲಿಗಳನ್ನು ಹಮ್ಮಿಕೊಳ್ಳಲಿದ್ದೇವೆ.