ಕರ್ನಾಟಕ ವಿಧಾನಸಭೆ ಚುನಾವಣೆ: ಕ್ಷೇತ್ರಗಳಲ್ಲಿ ಯಾತ್ರೆಗೆ ಬಿಜೆಪಿ ಸಜ್ಜು

ಮುಂದಿನ ವರ್ಷ ಮಧ್ಯ ಭಾಗದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬ್ರಾಂಡ್ ಮೋದಿ ಇಮೇಜಿನಿಂದ ಹೊರಬಂದು....
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on
ನವದೆಹಲಿ: ಮುಂದಿನ ವರ್ಷ ಮಧ್ಯ ಭಾಗದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬ್ರಾಂಡ್ ಮೋದಿ ಇಮೇಜಿನಿಂದ ಹೊರಬರಲು  ಭಾರತೀಯ ಜನತಾ ಪಾರ್ಟಿ ಸಜ್ಜಾಗಿದೆ. ಇದೇ 29ರಂದು ಪ್ರಧಾನಿ ಮೋದಿ ಬೀದರ್ ನಲ್ಲಿ ಚುನಾವಣೆ ತಯಾರಿಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.
ಬಿಜೆಪಿ ಕಾರ್ಯಕರ್ತರು 27,000 ಬೈಕ್ ಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ವಿಧಾನ ಸಭೆ ಚುನಾವಣೆಗೆ ನಾವು ವಿಶಿಷ್ಟ ರೀತಿಯಲ್ಲಿ ಸಜ್ಜಾಗುತ್ತಿದ್ದೇವೆ. ರಾಜ್ಯದ 54,000 ಚುನಾವಣಾ ಮತಗಟ್ಟೆಗಳ ಪಕಿ ಅರ್ಧದಷ್ಟು ಕಡೆಗಳಿಂದ ಪಕ್ಷದ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆಸಲಾಗುತ್ತಿದ್ದು ನವೆಂಬರ್ 2ರಂದು ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. 
27,000 ಮತಗಟ್ಟೆಗಳ ಪೈಕಿ ಪ್ರತಿ ಮತಗಟ್ಟೆಯಿಂದ 6 ಮಂದಿ ಕಾರ್ಯಕರ್ತರು ಬೈಕಿನಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನವನ್ನು ತೋರಿಸುವುದು ಮುಖ್ಯವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ತಿಳಿಸಿದ್ದಾರೆ. 75 ದಿನಗಳ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಸಂಚರಿಸಲಿದ್ದಾರೆ ಎಂದರು.
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ಪ್ರಧಾನಿ ಮೋದಿಯವರು ರಾಜ್ಯದ ಪ್ರತಿ ಏಳು ಪ್ರಾಂತ್ಯಗಳ ಒಂದರಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಕುರಿತ ಪ್ರಸ್ತಾವದ ಬಗ್ಗೆ ಬಿಜೆಪಿ ಪರಿಶೀಲನೆ ನಡೆಸುತ್ತಿದೆ. ಜನವರಿ 15ರ ಹೊತ್ತಿಗೆ ಚುನಾವಣಾ ದಿನಾಂಕವನ್ನು ಆಯೋಗ ಘೋಷಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಬಿಜೆಪಿಯಿದೆ.
ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಗ್ರಾಮಗಳಿಗೆ ಪಕ್ಷದ ನಾಯಕರು ಭೇಟಿ ಮಾಡಲಿದ್ದಾರೆ. 400 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮುರಳೀಧರ ರಾವ್ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಬಿ.ಎಸ್.ಯಡಿಯೂರಪ್ಪನವರು 400 ಗ್ರಾಮಗಳಲ್ಲಿ ಗ್ರಾಮಸಭೆಗಳನ್ನು ನಡೆಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com