ಅನಂತ್ ಕುಮಾರ್ ಹೆಗಡೆಗೆ ಮೋದಿ ಸಂಪುಟದಲ್ಲಿ ಸ್ಥಾನ: 4 ಬಾರಿ ಸಂಸದರಾಗಿದ್ದ ಹೆಗಡೆ ಕಿರು ಪರಿಚಯ

ಮೋದಿ ಸಂಪುಟದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಸಚಿವ ಸ್ಥಾನ ನೀಡಿರುವುದು ಎಲ್ಲರಿಗೂ ಅಶ್ಚರ್ಯ ತಂದಿದೆ. ರಾಜ್ಯ ವಿಧಾನಸಭೆ ಚುನಾವಣಾ ...
ಅನಂತ ಕುಮಾರ್ ಹೆಗಡೆ
ಅನಂತ ಕುಮಾರ್ ಹೆಗಡೆ
ಬೆಂಗಳೂರು: ಮೋದಿ ಸಂಪುಟದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಸಚಿವ ಸ್ಥಾನ ನೀಡಿರುವುದು ಎಲ್ಲರಿಗೂ ಅಶ್ಚರ್ಯ ತಂದಿದೆ. ರಾಜ್ಯ ವಿಧಾನಸಭೆ ಚುನಾವಣಾ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಕರ್ನಾಟಕಕ್ಕೆ ಒಂದು ಸ್ಥಾನ ನೀಡಿದ್ದಾರೆ. 
ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅನಂತ್​ ಕುಮಾರ್​ ಹೆಗಡೆ ಅವರು 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 49 ವರ್ಷದ ಅನಂತ್​ಕುಮಾರ್​ ಹೆಗಡೆ ತಮ್ಮ ಜನಪರ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. 
1968 ರಲ್ಲಿ ಸಿರಸಿಯಲ್ಲಿ ಜನಿಸಿದ ಹೆಗಡೆ, 1996 ರಲ್ಲಿ ತಮ್ಮ 28ನೇ ವಯಸ್ಸಿಗೆ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾದರು. ಹಲವು ಸಂಸದೀಯ ಸಮಿತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದರು. 
ರಾಷ್ಟ್ರೀಯ ಮಟ್ಟದ ಕದಂಬ ಎನ್ ಜಿ ಒ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ, ಗ್ರಾಮ ಆರೋಗ್ಯ, ಗ್ರಾಮೀಣ ಮಾರ್ಕೆಟಿಂಗ್ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ಕೈಗೊಂಡಿದ್ದಾರೆ. ರಾಜ್ಯ ಬಿಜೆಪಿಯ ಉಪಾಧ್ಯಕ್ಷರೂ ಕೂಡ ಆಗಿದ್ದಾರೆ.
ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಕಾರವಾರ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಸಿದ ಹಲ್ಲೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಸ್ಲಾಂ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿರಿಸಿ ಪೊಲೀಸರು ಅವರು ವಿರುದ್ಧ  ಸುಮೋಟೊ ಕೇಸು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com