ಮಂಡ್ಯ ನಾಲೆಗಳಿಗೆ ನೀರು ಬಿಡದ ಹಿನ್ನೆಲೆ: ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ ಸಂಸದ!

ಮಂಡ್ಯದಲ್ಲಿ ಬದುಕುತ್ತಿರುವ ರೈತ ಸಮುದಾಯದ ವಿರುದ್ಧ ಸರ್ಕಾರಕ್ಕೆ ದ್ವೇಷ ಏಕೆ? ಕಾಲುವೆಗಳಿಗೆ ನೀರು ಹರಿಸುವುದನ್ನು ಏಕೆ ನಿಲ್ಲಿಸಿದಿರಿ?...
ಸಿದ್ದರಾಮಯ್ಯ ಮತ್ತು ಪುಟ್ಟರಾಜು
ಸಿದ್ದರಾಮಯ್ಯ ಮತ್ತು ಪುಟ್ಟರಾಜು
ಮೈಸೂರು: ಸಂಸದ ಸಿ.ಎಸ್ ಪುಟ್ಟರಾಜು ಮತ್ತು ಸಿಎಂ ಸಿದ್ದರಾಮ್ಯ ಮಂಡ್ಯದಸಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪರಸ್ಪರ ನಿಂದಿಸಿಕೊಂಡಿದ್ದಾರೆ.
ಮಂಡ್ಯದಲ್ಲಿರುವ ವರುಣಾ ಮತ್ತು ವಿಸಿ ನಾಲೆಗಳಿಗೆ ನೀರು ಬಿಡದೇ, ತಮಿಳುನಾಡಿಗೆ ನೀರು ಹರಿಸಿದ್ದರ ಸಂಬಂಧ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ವಿರುದ್ಧ ಪುಟ್ಟರಾಜು ಹರಿಹಾಯ್ದರು.
ಮಂಡ್ಯದಲ್ಲಿ ಬದುಕುತ್ತಿರುವ ರೈತ ಸಮುದಾಯದ ವಿರುದ್ಧ ಸರ್ಕಾರಕ್ಕೆ ದ್ವೇಷ ಏಕೆ? ಕಾಲುವೆಗಳಿಗೆ ನೀರು ಹರಿಸುವುದನ್ನು ಏಕೆ ನಿಲ್ಲಿಸಿದಿರಿ? ಎಂದು ಪ್ರಶ್ನಿಸಿದರು.
ತಾವು ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರ ಜೊತೆ ಇಸ್ರೇಲ್ ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪುಟ್ಟರಾಜು, ಇಸ್ರೇಲ್ ನ ಕೃಷಿ ಪದ್ಧತಿ ಮತ್ತು ನೀರಾವರಿ ನಿರ್ವಹಣೆ ಉಳಿದ ದೇಶಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮತ್ತೊಂದಡೆ ಮಾತನಾಡಿದ ಸಿದ್ದರಾಮಯ್ಯ, ಸಂಸದ ಪುಟ್ಟರಾಜು ಮತ್ತು ಚಲುವರಾಯ ಸ್ವಾಮಿ ಇಬ್ಬರು ನನ್ನ ಹಿತೈಷಿಗಳು. ಜೆಡಿಎಸ್ ನಲ್ಲಿದ್ದರೂ ಪುಟ್ಟರಾಜು ಯಾವಾಗಲೂ ನನಗೆ ಬೆಂಬಲ ನೀಡುತ್ತಾರೆ. ಹೀಗಾಗಿ  ಮಂಡ್ಯದಲ್ಲಿ ನಾವು ಜೊತೆಗೂಡಿ ಉತ್ತಮ ಕೆಲಸಗಳನ್ನು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಮಂಡ್ಯದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಿಂದ ಶಾಸಕ ಹಾಗೂ ನಟ ಅಂಬರೀಷ್ ಅನಾರೋಗ್ಯದ ಕಾರಣ ನೀಡಿ ದೂರವೇ ಉಳಿದಿದ್ದರು. ಇದು ಸಿದ್ದರಾಮಯ್ಯ ಮತ್ತು ಅಂಬರೀಷ್ ನಡುವಿನ ಮುನಿಸು ಇನ್ನೂ ಮುಂದುವರಿದಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿತು.
ಜೆಡಿಎಸ್ ಬಂಡಾಯ ಶಾಸಕ ಚಲುವರಾಯ ಸ್ವಾಮಿ ಸಿಎಂ ಜೊತೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com