ಸಿದ್ದರಾಮಯ್ಯ ಸರ್ಕಾರದಿಂದ ಮೂಲಭೂತವಾದಿ ಮುಸ್ಲಿಮರಿಗೆ ಬೆಂಬಲ: ಮುರುಳೀಧರ ರಾವ್

ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವಿನ ರಾಜಕೀಯ ಜಗಳ ಕೋಮು ಬಣ್ಣ ಪಡೆದುಕೊಳ್ಳುತ್ತಿದೆ. ..
ಮುರುಳಿಧರ ರಾವ್
ಮುರುಳಿಧರ ರಾವ್
ಬೆಂಗಳೂರು: ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವಿನ  ರಾಜಕೀಯ ಜಗಳ ಕೋಮು ಬಣ್ಣ ಪಡೆದುಕೊಳ್ಳುತ್ತಿದೆ. ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಮೂಲಭೂತ ವಾದಿಗಳ ಪರ ಮೃಧು ದೋರಣೆ ಅನುಸರಿಸುತ್ತಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಮೂಲಭೂತವಾದಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ  ಮುರುಳಿಧರ ರಾವ್ ಆರೋಪಿಸಿದ್ದಾರೆ.
ಸರ್ಕಾರದ ಮೃದು ಧೋರಣೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ಜಿಹಾದ್ ಸಮರಕ್ಕೆ ರಾಜ್ಯದ ಯುವಕರು ನೇಮಕವಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಮುಸ್ಲಿಂ ಸುಮುದಾಯದ ಮೂಲಭೂತವಾದಿ ಅಂಶಗಳಿಗೆ ಸಿದ್ದರಾಮಯ್ಯ ಸರ್ಕಾರ ಅಜಾಗರೂಕತೆಯಿಂದ ಬೆಂಬಲ ನೀಡುತ್ತಿರುವುದು, ದೇಶದ ಭದ್ರತೆಗೆ ಧಕ್ಕೆ ತಂದಿದೆ.  ಬಿಜೆಪಿ ವಿಭಜನೆ ರಾಜಕೀಯ ವಿರುದ್ಧ ಹೋರಾಟ ನಡೆಸುತ್ತದೆ.  ಇಂಥ ಮೂಲಭೂತವಾದಿಗಳ ಸಂಚಿಗೆ ಬಿಜೆಪಿ ಕೂಡ ಬಲಿಯಾಗಿದೆ ಎಂದು ದೂರಿದ್ದಾರೆ. 
ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್ ಮತ್ತು ಎಂ ಎಂ ಕಲ್ಬುರ್ಗಿ ಅವರ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಇಂಥಹ ಹತ್ಯೆ ನಡೆಯುತ್ತಿದೆ, ಆದರೆ ಸರ್ಕಾರ ಇದರ ವಿರುದ್ಧ ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com